ಜೋ ಕೋಕ್ಸ್ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿದ ಪ್ರಧಾನಿ ಕೆಮರಾನ್ (ಎಎಫ್ ಪಿ ಚಿತ್ರ) 
ವಿದೇಶ

ಬ್ರಿಟನ್ ಸಂಸದೆ ಜೋ ಕೋಕ್ಸ್ ಹತ್ಯೆ ಶಂಕಿತ ಆರೋಪಿ ಬಂಧನ

ಬ್ರಿಟನ್ ನ ಲೇಬರ್ ಪಕ್ಷದ ಪ್ರಭಾವಿ ಸಂಸದೆ ಜೋ ಕೋಕ್ಸ್ ಹತ್ಯೆ ಪ್ರಕರಣ ಸಂಬಂಧ ಶುಕ್ರವಾರ ಲಂಡನ್ ಪೊಲೀಸರು ಓರ್ವ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ...

ಲಂಡನ್: ಬ್ರಿಟನ್ ನ ಲೇಬರ್ ಪಕ್ಷದ ಪ್ರಭಾವಿ ಸಂಸದೆ ಜೋ ಕೋಕ್ಸ್ ಹತ್ಯೆ ಪ್ರಕರಣ ಸಂಬಂಧ ಶುಕ್ರವಾರ ಲಂಡನ್ ಪೊಲೀಸರು ಓರ್ವ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ.

ಇಂಗ್ಲೆಂಡ್ ಅನ್ನು ಯೂರೋಪಿಯನ್ ಒಕ್ಕೂಟದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಅಭಿಯಾನ ನಡೆಸುತ್ತಿದ್ದ ಬ್ರಿಟನ್ ಸಂಸದೆ ಜೋ ಕೋಕ್ಸ್ ರನ್ನು ನಿನ್ನೆ ಬ್ರಿಸ್ಟಾಲ್ ನಲ್ಲಿ  ಗುಂಡಿಟ್ಟು ಹತ್ಯೆ ಗೈಯ್ಯಲಾಗಿತ್ತು. ಅಲ್ಲದೆ ಗುಂಡಿನ ದಾಳಿ ಬಳಿಕ ಆಕೆಯನ್ನು ಭೀಕರವಾಗಿ ಥಳಿಸಲಾಗಿತ್ತು. ಇದು ಬ್ರಿಟನ್ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಸ್ವತಃ ಬ್ರಿಟನ್ ಪ್ರಧಾನಿ  ಕೆಮರಾನ್ ಈ ಘಟನೆಯನ್ನು ಟೀಕಿಸಿದ್ದರು.

ಇದಾದ ಕೇವಲ 24 ಗಂಟೆಗಳ ಅವಧಿಯಲ್ಲೇ ಬ್ರಿಟನ್ ಪೊಲೀಸರು 52 ವರ್ಷದ ಶಂಕಿತ ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಬಂಧಿತ ವ್ಯಕ್ತ ನವ ನಾಜಿ  ಚಳುವಳಿಯ ಕಾರ್ಯಕರ್ತನಾಗಿದ್ದು, ಅರಾಜಕತಾವಾದಿ ಶಸ್ತ್ರಾಸ್ತ್ರ ಸಾಹಿತ್ಯದಲ್ಲಿ ಅಸಕ್ತನಾಗಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿರುವ ತನಿಖಾಧಿಕಾರಿ ನಿಕ್ ವಾಲೆನ್ ಅವರು,  ಸಂಸದೆ ಜೋ ಕೋಕ್ಸ್ ಹತ್ಯೆ ಪ್ರಕರಣ ಸಂಬಂಧ 52 ವರ್ಷದ ಥಾಮಸ್ ಮೇರ್ ಎಂಬಾತನನ್ನು ಬಂಧಿಸಲಾಗಿದೆ. ಶನಿವಾರ ಈತನನ್ನು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ  ಹಾಜರು ಪಡಿಸುವುದಾಗಿ ಅವರು ತಿಳಿಸಿದ್ದಾರೆ.

ಬಂಧಿತ ಆರೋಪಿ ಮೇರ್ ವಿರುದ್ಧ ಕೊಲೆ, ಭೀಕರ ದೈಹಿಕ ಹಲ್ಲೆ, ಅಪರಾಧ ಎಸಗುವ ಉದ್ದೇಶದಿಂದ ಬಂಧೂಕು ಹೊಂದಿದ ಆರೋಪ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆಯಡಿಯಲ್ಲಿ ದೂರು  ದಾಖಸಲಿಸಲಾಗಿದೆ ಎಂದು ವಾಲೆನ್ ತಿಳಿಸಿದರು.

ಇನ್ನು ನಿನ್ನೆ ಭೀಕರವಾಗಿ ಹತ್ಯೆಯಾದ ಸಂಸದೆ ಜೋ ಕೋಕ್ಸ್ ಅವರ ಸ್ಮರಣಾರ್ಥ ಪ್ರಧಾನಿ ಕೆಮರಾನ್ ಅವರು, ತಮ್ಮ ಸಹೋದ್ಯೋಗಿಗಳೊಂದಿಗೆ ಜೋ ಕೋಕ್ಸ್ ಅವರ ಭಾವಚಿತ್ರಕ್ಕೆ  ಪುಷ್ಪಗುಚ್ಛ ಅರ್ಪಿಸಿ ಶ್ರದ್ಧಾಂಜಲಿ ಸಮರ್ಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!