ಬ್ರೆಕ್ಸಿಟ್ ಮತಎಣಿಕಾ ಕಾರ್ಯ (ಎಪಿ ಚಿತ್ರ) 
ವಿದೇಶ

ಬ್ರೆಕ್ಸಿಟ್ ಜನಮತ ಎಫೆಕ್ಟ್; 31 ವರ್ಷಗಳಲ್ಲೇ ಕನಿಷ್ಟ ದರಕ್ಕೆ ಕುಸಿದ ಬ್ರಿಟೀಷ್ ಪೌಂಡ್ಸ್

ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಇರಬೇಕೆ ಅಥವಾ ಬೇಡವೆ ಎ೦ಬ ಬಗ್ಗೆ ಗುರುವಾರ ನಡೆದ ಮತದಾನದ ಬೆನ್ನಲ್ಲೇ ಬ್ರಿಟೀಷ್ ಷೇರುಮಾಕುಟ್ಟೆಯಲ್ಲಿ ತಲ್ಲಣ ಉಂಟಾಗಿದೆ...

ಲ೦ಡನ್: ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಇರಬೇಕೆ ಅಥವಾ ಬೇಡವೆ ಎ೦ಬ ಬಗ್ಗೆ ಗುರುವಾರ ನಡೆದ ಮತದಾನದ ಬೆನ್ನಲ್ಲೇ ಬ್ರಿಟೀಷ್ ಷೇರುಮಾಕುಟ್ಟೆಯಲ್ಲಿ ತಲ್ಲಣ ಉಂಟಾಗಿದೆ.

ಬ್ರೆಕ್ಸಿಟ್ ಜನಮತದ ಬಗ್ಗೆ ಶುಕ್ರವಾರ ಬೆಳಗ್ಗೆ ಫಲಿತಾ೦ಶದ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆಯಿರುವಂತೆಯೇ ಬ್ರಿಟೀಷ್ ಪೌಂಡ್ಸ್ ಡಾಲರ್ ಎದುರು 1.3642ಕ್ಕೆ ಕುಸಿದಿದೆ. ಇದು ಬ್ರಿಟೀಷ್  ಷೇರುಮಾರುಕಟ್ಟೆ ಇತಿಹಾಸದಲ್ಲೇ 31ವರ್ಷಗಳಲ್ಲೇ ಕನಿಷ್ಠ ದರ ಎಂದು ಹೇಳಲಾಗುತ್ತಿದೆ. 2009ರ ಜನವರಿಯಲ್ಲಿಯೂ ಬ್ರಿಟೀಷ್ ಷೇರುಮಾರುಕಟ್ಟೆ ಇಂತಹುದೇ ಕುಸಿತ ಅನುಭವಿಸಿತ್ತಾದರೂ, ಈ  ಮಟ್ಟಿಗೆ ಪೌಂಡ್ಸ್ ಮೌಲ್ಯ ಕುಸಿದಿರಲಿಲ್ಲ. ಆದರೆ ಈ ಬಾರಿ ಬ್ರಿಟನ್ ಅನ್ನು ಐರೋಪ್ಯ ಒಕ್ಕೂಟದಲ್ಲಿರಿಸಬೇಕೇ ಅಥವಾ ಬೇಡೇವ ಎಂಬ ಚರ್ಚೆ ಬ್ರಿಟೀಷ್ ಷೇರುಮಾರುಕಟ್ಟೆ ಮೇಲೆ ಗಂಭೀರ  ಪರಿಣಾಮ ಬೀರಿದೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಜನಮತಕ್ಕಾಗಿ ಚುನಾವಣೆ ನಡೆದಿದ್ದು, ಇಂದು ಬೆಳಗ್ಗೆ ಅದರ ಪಲಿತಾಂಶ ಲಭ್ಯವಾಗುತ್ತಿದೆ. ಮೂಲಗಳ ಪ್ರಕಾರ ಒಟ್ಟು 382 ಮತಎಣಿಕಾ  ಕೇಂದ್ರಗಳ ಪೈಕಿ 244 ಮತಎಣಿಕಾ ಕೇಂದ್ರಗಳಲ್ಲಿ ಮತಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಐರೋಪ್ಯಾ ಒಕ್ಕೂಟದಿಂದ ಬ್ರಿಟನ್ ದೇಶ ಹೊರಗೆ ಹೋಗಬೇಕು ಎಂಬ ನಿರ್ಣಯಕ್ಕೆ ಸುಮಾರು 4  ಲಕ್ಷಕ್ಕೂ ಅಧಿಕ ಮತಗಳು ಬಂದಿದ್ದರೆ, ಬ್ರಿಟನ್ ಐರೋಪ್ಯಾ ಒಕ್ಕೂಟದಲ್ಲೇ ಇರಬೇಕು ಎನ್ನುವ ನಿರ್ಣಯಕ್ಕೆ ಹಿನ್ನಡೆಯಾಗಿದೆ.

ಕೇವಲ ಬ್ರಿಟನ್ ಗೆ ಮಾತ್ರವಲ್ಲದೇ ಇಡೀ ವಿಶ್ವ ಸಮುದಾಯದ ಕುತೂಹಲಕ್ಕೆ ಕಾರಣವಾಗಿರುವ ಬ್ರೆಕ್ಸಿಟ್ ಜನಮತ ಸಂಗ್ರಹ ಫಲಿತಾಂಶವನ್ನು ಪ್ರಾ೦ತ್ಯವಾರು ಮಾದರಿಯಲ್ಲಿ ಘೋಷಣೆ  ಮಾಡಲಾಗುತ್ತಿದ್ದು, ಶುಕ್ರವಾರ ಸ೦ಜೆಯ ಹೊತ್ತಿಗೆ ಚುನಾವಣಾ ಆಯುಕ್ತರು ಲ೦ಡನ್‍ನ ಮ್ಯಾ೦ಚೆಸ್ಟರ್ ಹಾಲ್‍ನಲ್ಲಿ ಅಧಿಕೃತ ಫಲಿತಾ೦ಶ ಪ್ರಕಟಿಸಲಿದ್ದಾರೆ. ಇನ್ನು ಬ್ರೆಕ್ಸಿಟ್ ಚುನಾವಣೆಯಲ್ಲಿ  ಸುಮಾರು 4.65 ಕೋಟಿ ಜನರು ಮತದಾನ ಮಾಡಿದ್ದು, ಮತಪತ್ರದಲ್ಲಿ ಕೇವಲ ಒ೦ದೇ ಪ್ರಶ್ನೆಯಿತ್ತು. ಐರೋಪ್ಯ ಒಕ್ಕೂಟದಲ್ಲೇ ಯುನೈಟೆಡ್ ಕಿ೦ಗ್‍ಡಮ್ ಇರಬೇಕೆ ಅಥವಾ ಹೊರ  ಹೋಗಬೇಕೆ ಎ೦ಬ ಪ್ರಶ್ನೆಯನ್ನು ಕೇಳಲಾಗಿತ್ತು. ಅಧ೯ಕ್ಕಿ೦ತ ಹೆಚ್ಚು ಮತಗಳನ್ನು ಪಡೆದ ಅಭಿಪ್ರಾಯವನ್ನು ಮನ್ನಿಸಲಾಗುತ್ತದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT