ಚೀನಾ ಮೇಲೆ ಹಾರಿದ ತೈವಾನ್ ಸೂಪರ್ ಸಾನಿಕ್ ಕ್ಷಿಪಣಿ (ಸಂಗ್ರಹ ಚಿತ್ರ) 
ವಿದೇಶ

ಚೀನಾ ಮೇಲೆ ಸೂಪರ್ ಸಾನಿಕ್ ಕ್ಷಿಪಣಿ ಹಾರಿಸಿದ ತೈವಾನ್!

ತೈವಾನ್ ನ ಯುದ್ಧ ನೌಕೆಯೊಂದು ಆಕಸ್ಮಿಕವಾಗಿ ಚೀನಾದತ್ತ ಸೂಪರ್ ಸಾನಿಕ್ ಕ್ಷಿಪಣಿಯನ್ನು ಹಾರಿಸಿದ ಪರಿಣಾಮ ಉಭಯ ದೇಶದ ಸೈನಿಕರಲ್ಲಿ ಕೆಲ ಹೊತ್ತು ಆತಂಕದ ವಾತಾವರಣೆ ನೆಲೆಸಿದ್ದ ಘಟನೆ ಶುಕ್ರವಾರ ನಡೆದಿದೆ...

ಬೀಜಿಂಗ್: ತೈವಾನ್ ನ ಯುದ್ಧ ನೌಕೆಯೊಂದು ಆಕಸ್ಮಿಕವಾಗಿ ಚೀನಾದತ್ತ ಸೂಪರ್ ಸಾನಿಕ್ ಕ್ಷಿಪಣಿಯನ್ನು ಹಾರಿಸಿದ ಪರಿಣಾಮ ಉಭಯ ದೇಶದ ಸೈನಿಕರಲ್ಲಿ ಕೆಲ ಹೊತ್ತು ಆತಂಕದ  ವಾತಾವರಣೆ ನೆಲೆಸಿದ್ದ ಘಟನೆ ಶುಕ್ರವಾರ ನಡೆದಿದೆ.

ಶುಕ್ರವಾರ ಬೆಳಗ್ಗೆ ತೈವಾನ್ ನ ಕಾವೋಹ್ಸುಂಗ್ ನ ಉತ್ತರ ದ್ವೀಪದ ಬಳಿ ಇರುವ ನೌಕಾ ಶಿಬಿರದಲ್ಲಿದ್ದ ಯುದ್ಧ ನೌಕೆಯಿಂದ ಸಿಯುಂಗ್ ಫೆಂಗ್ III ಎಂಬ ಸ್ವದೇಶಿ ನಿರ್ಮಿಕ ಸೂಪರ್ ಸಾನಿಕ್  ಕ್ಷಿಪಣಿ ಪ್ರಮಾದ ವಶಾತ್ ಉಡಾವಣೆಗೊಂಡಿದೆ. ಕ್ಷಿಪಣಿಯು ಸುಮಾರು 300 ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯಹೊಂದಿದ್ದು, ಕ್ಷಿಪಣಿ ಸುಮಾರು 75 ಕಿ.ಮೀ ದೂರ ಕ್ರಮಿಸಿದ್ದಾಗಲೇ ಪ್ರಮಾದ  ಅರಿತ ತೈವಾನ್ ನಾವಿಕರು ಕ್ಷಿಪಣಿಯನ್ನು ನಿಯಂತ್ರಿಸಿ ಚೀನಾದ ಪೆಂಘು ಸಮುದ್ರ ತೀರದಲ್ಲಿ ಬೀಳುವಂತೆ ಮಾಡಿದ್ದಾರೆ.

ಈ ಪ್ರಮಾದ ವಶಾತ್ ಘಟನೆಗೆ ತೈವಾನ್ ದಿಗ್ರ್ಬಮೆ ವ್ಯಕ್ತಪಡಿಸಿದ್ದರೆ, ಚೀನಾ ಸೇನೆ ಘಟನೆ ಕುರಿತಂತೆ ತೈವಾನ್ ನಿಂದ ಮಾಹಿತಿ ಕೇಳಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ತೈವಾನ್ ವೈಸ್  ಅಡ್ಮಿರಲ್ ಮೇಯಿ ಚಿಯಾ ಹ್ಸು ಅವರು, ತಮಗೆ ಸಿಕ್ಕ ಪ್ರಾಥಮಿಕ ಮಾಹಿತಿಯನ್ವಯ ನೌಕೆಯಲ್ಲಿದ್ದ ಶಸ್ತ್ರಾಸ್ತ್ರಗಳ ಕಾರ್ಯವೈಖರಿ ಕುರಿತು ಪರೀಕ್ಷೆ ನಡೆಸುತ್ತಿದ್ದ ವೇಳೆ ಕ್ಷಿಪಣಿ ಪ್ರಮಾದವಶಾತ್  ಉಡಾವಣೆಯಾಗಿದೆ. ಘಟನೆ ಆಕಸ್ಮಿಕವಾಗಿಯೇ ಆಗಿದ್ದರೂ, ಗಂಭೀರವಾಗಿದೆ. ಹೀಗಾಗಿ ಪ್ರಕರಣ ಕುರಿತಂತೆ ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.

ಕಮ್ಯುನಿಸ್ಟ್ ಪಕ್ಷದ 95ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಚೀನಾದಲ್ಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಇದೇ ಸಂದರ್ಭದಲ್ಲಿ  ತೈವಾನ್ ನಿಂದ ಕ್ಷಿಪಣಿ ಹಾರಿಬಂದ ವಿಚಾರ ಚೀನಾದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದೆ. ಕ್ಷಿಪಣಿ ಪ್ರಮಾದ ವಶಾತ್ ಉಡಾವಣೆಯಾಯಿತೋ ಅಥವಾ ಸಂಭ್ರಮಾಚರಣೆ ತಡೆಯಲು ತೈವಾನ್  ಸೇನೆ ಮಾಡಿದ ತಂತ್ರವೋ ಎಂಬುದರ ಕುರಿತು ವಾದ-ವಿವಾದಗಳು ಕೇಳಿಬರುತ್ತಿವೆ. ಈ ಹಿಂದೆ "ತೈವಾನ್ ಸ್ವಾತಂತ್ರ್ಯಕ್ಕೆ ಚೀನಾ ವಿರೋಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!