ಚೀನಾ ರಕ್ಷಣಾ ಬಜೆಟ್ ಗಾತ್ರದಲ್ಲಿ ಹೆಚ್ಚಳ (ಸಂಗ್ರಹ ಚಿತ್ರ) 
ವಿದೇಶ

ಚೀನಾ ರಕ್ಷಣಾ ಬಜೆಟ್ ಗಾತ್ರದಲ್ಲಿ ಶೇ.7.6ರಷ್ಟು ಹೆಚ್ಚಳ..!

ಇತ್ತೀಚಿನ ದಿನಗಳಲ್ಲಿ ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಗಿ ಸಂಕಷ್ಟ ಎದುರಿಸುತ್ತಿರುವ ಚೀನಾ ತನ್ನ ರಕ್ಷಣಾ ಬಜೆಟ್ ಗಾತ್ರದಲ್ಲಿ ಶೇ.7.6ರಷ್ಟು ಹೆಚ್ಚಳ ಮಾಡಿಕೊಂಡಿದೆ...

ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಗಿ ಸಂಕಷ್ಟ ಎದುರಿಸುತ್ತಿರುವ ಚೀನಾ ತನ್ನ ರಕ್ಷಣಾ ಬಜೆಟ್ ಗಾತ್ರದಲ್ಲಿ ಶೇ.7.6ರಷ್ಟು ಹೆಚ್ಚಳ ಮಾಡಿಕೊಂಡಿದೆ.

ಚೀನಾದ ಒಟ್ಟಾರೆ ರಕ್ಷಣಾ ಬಜೆಟ್ ನಲ್ಲಿ ಶೇ.7.6ರಷ್ಟು ಏರಿಕೆಯಾಗಿದ್ದು, ಬಜೆಟ್ ನ ಗಾತ್ರ ಸುಮಾರು 146 ಬಿಲಿಯನ್ ಡಾಲರ್ ಗೆ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಚೀನಾದ ಈ  ರಕ್ಷಣಾ ಬಜೆಟ್ ನ ಗಾತ್ರ ಭಾರತದ ರಕ್ಷಣಾ ಬಜೆಟ್ ಗಿಂತ 4 ಪಟ್ಟು ಹೆಚ್ಚು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಕಣ್ಣಿಟ್ಟಿರುವ ಚೀನಾ  ಶತಾಯಗತಾಯ ಅದನ್ನು ಸಾಧಿಸಲೇಬೇಕು ಎಂದು ಹವಣಿಸುತ್ತಿದ್ದು, ಇದೇ ಕಾರಣ್ಕಕಾಗಿ  ಚೀನಾ ಜಗತ್ತಿನ ದೊಡ್ಡಣ್ಣ ಅಮೆರಿಕದೊಂದಿಗೆ ವೈರತ್ವ ಕಟ್ಟಿಕೊಂಡಿದೆ. ಹೀಗಾಗಿ ಚೀನಾ ತನ್ನ   ಆರ್ಥಿಕ ಸಂಕಷ್ಟದ ನಡುವೆಯೂ ತನ್ನ ರಕ್ಷಣಾ ಬಜೆಟ್ ಗಾತ್ರವನ್ನು ಹೆಚ್ಚಳ ಮಾಡಿಕೊಂಡಿದೆ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ಪ್ರಸಕ್ತ ಸಾಲಿನ ರಕ್ಷಣಾ ಬಜೆಟ್ ಗಾತ್ರದ ಹೆಚ್ಚಳದಿಂದಾಗಿ ಅದು ರಕ್ಷಣಾ ಕ್ಷೇತ್ರಕ್ಕೆ ಅತಿ ಹೆಚ್ಚು ಹಣ ವ್ಯಯಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನಪಡೆದಂತಾಗಿದೆ. ಮೊದಲ  ಸ್ಥಾನದಲ್ಲಿ ಅಮೆರಿಕ ಇದ್ದು, ಈ ದೇಶ ರಕ್ಷಣೆಗೆಂದು ವಾರ್ಷಿಕ 534 ಬಿಲಿಯನ್ (53400 ಕೋಟಿ) ಡಾಲರ್ ಮೀಸಲಿರಿಸಿದೆ. ಇನ್ನು ಭಾರತ ಕೂಡ ಈ ಪಟ್ಟಿಯಲ್ಲಿ ಹಿಂದೆ ಬಿದ್ದಿಲ್ಲ. ಭಾರತ ರಕ್ಷಣಾ  ಕ್ಷೇತ್ರಕ್ಕೆ ಬಜೆಟ್ ನಲ್ಲಿ ಸುಮಾರು  35.6 ಬಿಲಿಯನ್ (3560 ಕೋಟಿ) ಡಾಲರ್ ಮೀಸಲಿರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

37 ವರ್ಷ ನಿಷೇಧದ ಬಳಿಕ ಮತ್ತೆ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ; ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಮೃತದೇಹಗಳ ಮೇಲೆ ರಾಜಕೀಯ ಮಾಡಬೇಡಿ: ರಾಹುಲ್ ಗಾಂಧಿ ವಿರುದ್ಧ ಭಗವಂತ್ ಮಾನ್ ಕಿಡಿ

ಭವಿಷ್ಯದ ಬಾಹ್ಯಾಕಾಶ ಯಾನಕ್ಕೆ ಅಂತರರಾಷ್ಟ್ರೀಯ ಸಹಕಾರ ಮುಖ್ಯ: ಸುನಿತಾ ವಿಲಿಯಮ್ಸ್

KGF ಕಾಲೇಜಿನಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ: ತರಗತಿಯಲ್ಲಿ ಯುವಕನ ಥಳಿತಕ್ಕೆ ಪ್ರಜ್ಞೆತಪ್ಪಿ ಬಿದ್ದ ವಿದ್ಯಾರ್ಥಿನಿ, Video

ದುರ್ಗಾಪೂಜೆ ವೇಳೆ 'ಬಂಗಾಳಿಗಳು ಮೀನು, ಮಟನ್ ತಿನ್ನುತ್ತಾರೆ': ಬಾಗೇಶ್ವರ ಬಾಬಾಗೆ ಟಕ್ಕರ್ ಕೊಟ್ಟ ಬಿಜೆಪಿ ನಾಯಕರು!