ಮಾಸ್ಕೋ: ಪೂರ್ವ ರಷ್ಯಾದಲ್ಲಿ ಸೋಮವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6ರಷ್ಟು ತೀವ್ರತೆ ದಾಖಲಾಗಿದೆ.
ಭಾನುವಾರ ತಡರಾತ್ರಿಯಲ್ಲಿ ರಷ್ಯಾದ ಪೂರ್ವ ವಲಯದಲ್ಲಿರುವ ಕಮ್ಚಟ್ಕಾ ಪೆನಿನ್ಸುಲಾ ಭೂಕಂಪನದ ಕೇಂದ್ರವಾಗಿದ್ದು, ಬರಿಂಗ್ ಸಮುಗ್ರ ಪ್ರದೇಶದ ನೈರುತ್ಯ ದ್ವೀಪಗಳ ಸುಮಾರು 146 ಮೈಲುಗಳ ಅಡಿಯಲ್ಲಿ ಭೂಕಂಪನ ಕೇಂದ್ರ ಎಂದು ದಾಖಲಾಗಿದೆ. ಫೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ಭೂಕಂಪನ ತೀವ್ರತೆಯನ್ನು ಪರಿಶೀಲಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6ರಷ್ಚು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪೆನಿನ್ಸುಲಾ ದ್ವೀಪ ಸಮೂಹ 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, ಸುನಾಮಿ ಭೀತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ವರದಿಗಳ ಪ್ರಕಾರ ಈ ವರೆಗೂ ಯಾವುದೇ ಸಾವು-ನೋವಿನ ವರದಿಗಳು ಬಂದಿಲ್ಲ.
ಕ್ಯಾಲಿಫೋರ್ನಿಯಾದಲ್ಲಿ ನಡುಗಿದ್ದ ಭೂಮಿ
ಇನ್ನು ನಿನ್ನೆಯಷ್ಟೇ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿಯೂ ಭೂಮಿ ನಡುಗಿತ್ತು. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಿನ್ನೆ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.1ರಷ್ಟು ತೀವ್ರತೆ ಹೊಂದಿತ್ತು.