ಇಸಿಸ್ ನಿಂದ ಆತ್ಮಹತ್ಯಾ ಬಾಂಬ್ ದಾಳಿ: 30 ಸಾವು 
ವಿದೇಶ

ಇಸಿಸ್ ನಿಂದ ಆತ್ಮಹತ್ಯಾ ಬಾಂಬ್ ದಾಳಿ: 30 ಸಾವು

ದಕ್ಷಿಣ ಬಾಗ್ದಾದ್ ನ ಇಸ್ಕಾನ್ದರಿಯಾ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಇರಾನ್ ಸಂಘಟನೆಯ ಉಗ್ರರು ಅತ್ಯಹತ್ಯಾ ಬಾಂಬ್ ಸ್ಫೋಟಿಸಿದ್ದು, ಪರಿಣಾಮ 30 ಮಂದಿ...

ಹಿಲ್ಲಾ: ದಕ್ಷಿಣ ಬಾಗ್ದಾದ್ ನ ಇಸ್ಕಾನ್ದರಿಯಾ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಇರಾನ್ ಸಂಘಟನೆಯ ಉಗ್ರರು ಅತ್ಯಹತ್ಯಾ ಬಾಂಬ್ ಸ್ಫೋಟಿಸಿದ್ದು, ಪರಿಣಾಮ 30 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ ಎಂದು ತಿಳಿದುಬಂದಿದೆ.

ನಿನ್ನೆ ಇಸ್ಕಾನ್ದರಿಯಾ ನಗರದಲ್ಲಿ ಸ್ಥಳೀಯರು ಫುಟ್ ಬಾಲ್ ಆಡುತ್ತಿದ್ದರು. ಆಟ ಮುಗಿದ ನಂತರ ಅಲ್ಲಿನ ನಗರದ ಮೇಯರ್ ಸೇರಿ ಇನ್ನಿತರೆ ಅಧಿಕಾರಿಗಳು ಗೆದ್ದ ತಂಡಕ್ಕೆ ಪ್ರಶಸ್ತಿಯನ್ನು ನೀಡುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ತಾನು ತೊಟ್ಟಿದ್ದ ಬಾಂಬ್'ನ್ನು ಇದ್ದಕ್ಕಿದ್ದಂತೆ ಸ್ಫೋಟಿಸಿಕೊಂಡಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಘಟನೆ ವೇಳೆ ಮೇಯರ್ ಸೇರಿದಂತೆ 30 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯಾ ಬಾಂಬ್ ದಾಳಿಯ ಹೊಣೆಯನ್ನು ಇಸಿಸ್ ಹೊತ್ತುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!