ವಿಮಾನ ಹೈಜಾಕ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಈಜಿಪ್ಟ್ ಸಚಿವ ಶರೀಫ್ ಫಾತಿ 
ವಿದೇಶ

ಈಜಿಪ್ಟ್ ವಿಮಾನ ಹೈಜಾಕ್ ಮಾಡಿದ್ದ ವ್ಯಕ್ತಿ ಬಂಧನ

ಈಜಿಪ್ಟ್ ಏರ್ ವಿಮಾನವನ್ನು ಹೈಜಾಕ್ ಮಾಡಿ ಭಾರೀ ತಲೆನೋವುಂಟು ಮಾಡಿದ್ದ ವ್ಯಕ್ತಿಯನ್ನು ಸೈಪ್ರಸ್ ನಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ...

ಕೈರೋ: ಈಜಿಪ್ಟ್ ಏರ್ ವಿಮಾನವನ್ನು ಹೈಜಾಕ್ ಮಾಡಿ ಭಾರೀ ತಲೆನೋವುಂಟು ಮಾಡಿದ್ದ ವ್ಯಕ್ತಿಯನ್ನು ಸೈಪ್ರಸ್ ನಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಈ ಕುರಿತಂತೆ ಸೈಪ್ರಸ್ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಸೈಪ್ರಸ್ ನಲ್ಲಿ ಈಜಿಪ್ಟ್ ಏರ್ ವಿಮಾನವನ್ನು ಹೈಜಾಕ್ ಮಾಡಿದ್ದ ವ್ಯಕ್ತಿಯನ್ನು ಇದೀಗ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ದೀರ್ಘಾವಧಿಯ ನಾಯಕ ಮುಕ್ತಾಯಗೊಂಡಿದೆ. ಇದರಂತೆ ಪ್ರಯಾಣಿಕರ ಬಿಡುಗಡೆ ನಂತರ ವಿಮಾನ ಸಿಬ್ಬಂದಿಗಳು ಬಿಡುಗಡೆಗೊಂಡಿದ್ದಾರೆ ಎಂದು ಹೇಳಿದೆ,

ಅಲೆಕ್ಸಾಂಡ್ರಿಯಾದಿಂದ ಕೈರೋಗೆ ಹೋಗಿದ್ದ ಎಂಎಸ್ 181  ಏರ್‌ಬಸ್ ವಿಮಾನವನ್ನು ಅಪಹರಣಗೈದ ಸೈಫಿದೀನ್ ಮುಸ್ತಾಫಾ ಎಂಬ ವ್ಯಕ್ತಿ ಅದನ್ನು ಸೈಪ್ರಸ್‌ನ ಲರ್ಕಾನೋ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದನು. ವಿಮಾನದಲ್ಲಿ ಬಾಂಬ್ ಇಟ್ಟಿದ್ದೇನೆ, ಅದನ್ನೀಗ ಸ್ಫೋಟ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿ ಈತ ವಿಮಾನ ಅಪಹರಣ ಮಾಡಿದ್ದನು. ಇದೀಗ ವಿಮಾನ ಹೈಜಾಕ್ ಮಾಡಿದ್ದವನನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video