ವಿದೇಶ

ವ್ಯಂಗ್ಯ ಚಿತ್ರಕಾರ ಮಾರಿಯೋ ಮಿರಾಂಡಾಗೆ ಗೂಗಲ್ ಡೂಡಲ್ ಗೌರವ

Mainashree
ನವದೆಹಲಿ: ಖ್ಯಾತ ವ್ಯಂಗ್ಯ ಚಿತ್ರಕಾರ ಮಾರಿಯೋ ಮಿರಾಂಡಾ ಅವರ 90ನೇ ಜನ್ಮದಿನವಾದ ಸೋಮವಾರ ಗೂಗಲ್ ಸಂಸ್ಥೆಯು ಅವರಿಗೆ ಡೂಡಲ್ ಗೌರವ ಸಲ್ಲಿಸಿದೆ. 
ತಮ್ಮ ವ್ಯಂಗ್ಯ ಚಿತ್ರಗಳಲ್ಲಿ, ತೈಲ ಚಿತ್ರಗಳಲ್ಲಿ ಗೋವೆಯ ಪ್ರಕೃತಿ ದೃಶ್ಯಗಳನ್ನು, ಗೋವಾ ಜನತೆಯ ಜನಜೀವನವನ್ನು ಸೆರೆ ಹಿಡಿದಿದ್ದ ಅವರು, ಹಲವಾರು ಪುಸ್ತಕಗಳಿಗೆ ವಿನ್ಯಾಸ ಮಾಡಿಕೊಟ್ಟಿದ್ದರು. ಅವರು ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದ್ದರು. ಅನಾರೋಗ್ಯದಿಂದ 2011ರಲ್ಲಿ ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. 
ಮಿರಾಂಡಾ ಅವರು ಪದ್ಮ ಭೂಷಣ, ಪದ್ಮಶ್ರೀಗಳನ್ನು ಸೇರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮ ಭೂಷಣ ಮತ್ತು 2012 ರಲ್ಲಿ ಮರಣೋತ್ತರವಾಗಿ ಪದ್ಮವಿಭೂಷಣ ನೀಡಲಾಯಿತು.
SCROLL FOR NEXT