ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) 
ವಿದೇಶ

ಡೋನಾಲ್ಡ್ ಟ್ರಂಪ್ ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿ?

ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರು ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಲಾಗಿದೆ...

ವಾಷಿಂಗ್ಟನ್‌: ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರು ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಲಾಗಿದೆ. ಇಂಡಿಯಾನದಲ್ಲಿ ನಡೆದ ಪಕ್ಷದ  ಆಂತರಿಕ ಚುನಾವಣೆಯಲ್ಲಿ ಟ್ರಂಪ್ ಸ್ಪಷ್ಟ ಬಹುಮತ ಪಡೆಯುವುದರೊಂದಿಗೆ ಅಮೆರಿಕ ಅಧ್ಯಕ್ಷೀಯ ಸ್ಥಾನಕ್ಕೆ ನಾಮಕರಣಗೊಳ್ಳುವುದು ನಿಚ್ಚಳವಾಗಿದೆ.

ಇಂಡಿಯಾನದಲ್ಲಿ ನಡೆದ ಚುನಾವಣೆಯಲ್ಲಿ ಟ್ರಂಪ್‌ ಸ್ಪಷ್ಟ ಬಹುಮತಗಳಿಸಿದ ಪರಿಣಾಮ ಅವರ ಸಮೀಪದ ಪ್ರತಿಸ್ಪರ್ಧಿ ಟೇಡ್‌ ಕ್ರೂಜ್‌ ಅವರು ಸ್ಪರ್ಧೆಯನ್ನು ಕೈಬಿಟ್ಟಿದ್ದಾರೆ. ಅಲ್ಲದೆ, ವಿವಾದಿತ  ಹೇಳಿಕೆಗಳಿಂದಲೇ ಖ್ಯಾತಿ ಪಡೆದಿರುವ 68 ವರ್ಷದ  ಕೋಟ್ಯಧಿಪತಿ ಡೊನಾಲ್ಡ್ ಟ್ರಂಪ್ ಈಗ ಡೆಮಾಕ್ರಟಿಕ್‌ ಪಕ್ಷದ ಪ್ರಬಲ ಸ್ಪರ್ಧಿ ಹಿಲರಿ ಕ್ಲಿಂಟನ್‌ ಅವರೊಂದಿಗೆ ನೇರವಾಗಿ ಚುನಾವಣಾ  ಕಣದಲ್ಲಿ ಸೆಣಸಲಿದ್ದಾರೆ.

ಇನ್ನು ಸಮೀಪದ ಪ್ರತಿಸ್ಪರ್ಧಿ ಟ್ರೇಡ್ ಕ್ರೂಜ್ ಅವರು ಸ್ಪರ್ಧೆ ಕೈಬಿಟ್ಟ ಕಾರಣ ಬಹುತೇಕ ಮತಗಳು ಟ್ರಂಪ್ ಪಾಲಾಗಲಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ  ಇನ್ನು ಅವಶ್ಯವಿರುವ 190 ಮತಗಳನ್ನು ಟ್ರಂಪ್ ಸುಲಭವಾಗಿ ಬುಟ್ಟಿಗೆ ಹಾಕಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಣದಿಂದ ಹಿಂದೆ ಸರಿದ ಓಹಿಯೋ ಗವರ್ನರ್
ಟ್ರಂಪ್ ಗೆ ಕೊನೆ ಹಂತದಲ್ಲಿ ಪ್ರಬಲ ಸ್ಪರ್ಧಿಯಾಗುತ್ತಾರೆ ಎಂದು ಭಾವಿಸಲಾಗಿದ್ದ ಓಹಿಯೊ ಗವರ್ನರ್‌ ಜಾನ್‌ ಕೆಸಿಶ್‌ ಅವರು ಕೂಡ ಇದೀಗ ಕಣದಿಂದ ಹಿಂದೆ ಸರಿದಿದ್ದು, ಟ್ರಂಪ್ ಗೆ ಇದೀಗ  ಪಕ್ಷದಲ್ಲಿ ಯಾವುದೇ ಪ್ರಬಲ ಪ್ರತಿಸ್ಪರ್ಧಿಗಳೂ ಇಲ್ಲದಂತಾಗಿದೆ.

ಈ ಬಗ್ಗೆ ಕೆಸಿಶ್ ಪರ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಕೆಸಿಶ್ ಅವರು ಸುದ್ದಿಗೋಷ್ಠಿ ಕರೆದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಪ್ರಚಾರ ಸಭೆ ಆರಂಭಿಸಲು ಕರೆ ನೀಡಿದ ರಿಪಬ್ಲಿಕನ್‌ ಪಕ್ಷ
ಅತ್ತ ಇಂಡಿಯಾನದಲ್ಲಿ ಡೊನಾಲ್ಡ್ ಟ್ರಂಪ್‌ ಗೆಲುವು ಸಾಧಿಸುತ್ತಿದ್ದಂತೆಯೇ ಇತ್ತ ರಿಪಬ್ಲಿಕನ್‌ ನ್ಯಾಷನಲ್‌ ಕಮಿಟಿ (ಆರ್ಎನ್‌ಸಿ) ಅಧ್ಯಕ್ಷ ರೀನ್ಸ್‌ ಪ್ರೀಬಸ್‌ ಅವರು ಟ್ರಂಪ್‌ ಅವರ ಪರ ಪ್ರಚಾರ  ಸಭೆಗಳನ್ನು ನಡೆಸುವಂತೆ ಪಕ್ಷಕ್ಕೆ ಕರೆ ನೀಡಿದರು.

ಉಲ್ಟಾ ಹೊಡೆದ ಬಾಬಿ ಜಿಂದಾಲ್; ಟ್ರಂಪ್ ಗೆ ಬೆಂಬಲ

ಇನ್ನು ಈ ಹಿಂದೆ ಡೊನಾಲ್ಡ್‌ ಟ್ರಂಪ್‌ ಅವರನ್ನು ಕಠಿಣವಾಗಿ ಟೀಕಿಸುತ್ತಿದ್ದ ಮತ್ತು ಅಧ್ಯಕ್ಷೀಯ ಸ್ಥಾನಾಕಾಂಕ್ಷಿಯೂ ಆಗಿದ್ದ ಭಾರತೀಯ ಸಂಜಾತ ಬಾಬ್ಬಿ ಜಿಂದಾಲ್‌ ಅವರು ಟ್ರಂಪ್‌ ಅವರಿಗೆ ಮತ  ಹಾಕುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, "‘ಹಿಲರಿಗಿಂತ ಟ್ರಂಪ್‌ ಉತ್ತಮ ಎಂದು ಭಾವಿಸುತ್ತೇನೆ. ವೈಯಕ್ತಿಕವಾಗಿ ನಾನು ಟ್ರಂಪ್‌ಗೆ ಮತ ಚಲಾಯಿಸುತ್ತೇನೆ"  ಎಂದು ಜಿಂದಾಲ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT