ವಾಷಿಂಗ್ಟನ್: ಹೆಚ್-1ಬಿ ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿತೂರಿ ನಡೆಸಿದ ಆರೋಪ ಹಿನ್ನೆಲೆಯಲ್ಲಿ ನಾಲ್ವರು ಭಾರತೀಯ ಅಮೆರಿಕನ್ನರ ವಿರುದ್ಧ ದೂರು ದಾಖಲಿಸಲಾಗಿದೆ.
ಹೆಚ್-1ಬಿ ಕೆಲಸ ವೀಸಾ ಪಡೆಯಲು ಮೋಸದ ಅರ್ಜಿಗಳನ್ನು ಸಲ್ಲಿಸಿದ್ದಕ್ಕಾಗಿ ಸುನಿತಾ ಗುಂಟಿಪಲ್ಲಿ, ವೆಂಕಟ್ ಗುಂಟಿಪಲ್ಲಿ, ಪ್ರತಾಪ್ ಬೋಬ್ ಕೊಂಡಮೂರಿ ಮತ್ತು ಸಂಧ್ಯಾ ರಾಮಿರೆಡ್ಡಿ ವಿರುದ್ಧ ಕಳೆದ ವಾರ ದೂರು ದೋಷಾರೋಪಣೆಯನ್ನು ದಾಖಲಿಸಲಾಗಿದೆ.
ದೋಷಾರೋಪಪಟ್ಟಿ ಪ್ರಕಾರ, ನಾಲ್ವರು ಪ್ರತಿವಾದಿಗಳು 100ಕ್ಕೂ ಹೆಚ್ಚು ಹೆಚ್-1ಬಿ ವೀಸಾಗಳನ್ನು ಅಸಮರ್ಪಕವಾಗಿ ಕ್ಯಾಲಿಫೋರ್ನಿಯಾ ಕಾರ್ಪೊರೇಶನ್ ಮೂಲಕ ಸಲ್ಲಿಸಿದ್ದಾರೆ.
ವೆಂಕಟ್ ಮತ್ತು ಸುನೀತಾ ದಂಪತಿ ಅಮೆರಿಕದಲ್ಲಿ ಡಿಎಸ್ ಸಾಫ್ಟ್ ಟೆಕ್ ಅಂಡ್ ಇಕ್ವಿನೆಟ್ಟ್ ಎಂಬ ಎರಡು ಉದ್ಯೋಗ ಸಿಬ್ಬಂದಿ ಕಂಪೆನಿಯ ತಂತ್ರಜ್ಞಾನ ಸಂಸ್ಥೆಗಳನ್ನು ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯಲ್ಲಿ ಹೊಂದಿದ್ದಾರೆ. ಅದರಲ್ಲಿ ವೆಂಕಟ್ ಅಧ್ಯಕ್ಷರಾದರೆ, ಸುನಿತಾ ಉಪಾಧ್ಯಕ್ಷರಾಗಿದ್ದಾರೆ. ಈ ಕಂಪೆನಿಯಲ್ಲಿ ಇರುವ ಉದ್ಯೋಗಿಗಳೆಲ್ಲ ಕೆಲಸದ ನೀತಿ ನಿಯಮವನ್ನು ಪಾಲಿಸದೆ ನೇಮಕಗೊಂಡವರು. ಇವು ಸ್ವಯಂಘೋಷಿತ ಕಂಪೆನಿಗಳಾಗಿವೆ.
ಎಲ್ಲಾ ಏಳು ಮಂದಿಯನ್ನು ವೀಸಾ ವಂಚನೆ, ಸುಳ್ಳು ಹೇಳಿಕೆ, ಮೇಲ್ ವಂಚನೆ, ನ್ಯಾಯಕ್ಕೆ ಅಡ್ಡಿಪಡಿಸಿದ್ದಕ್ಕೆ, ಮತ್ತು ಸಾಕ್ಷಿ ಅಕ್ರಮವಾಗಿ ಮತ್ತು ನೆರವು ಹಾಗೂ ಅಪರಾಧಕ್ಕೆ ಕುಮ್ಮಕ್ಕು ನೀಡಿರುವ ಆರೋಪದ ಮೇಲೆ ಎಲ್ಲಾ ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.