ವಿದೇಶ

90 ಮೀಟರ್ ಆಳದ ಕೊಳವೆ ಬಾವಿಯಿಂದ ಬದುಕಿ ಬಂದ 3 ವರ್ಷದ ಬಾಲಕ!

Sumana Upadhyaya

ನವದೆಹಲಿ: 90 ಮೀಟರ್ ಆಳದ ಕೊಳವೆ ಬಾವಿಯಲ್ಲಿ ಮಧ್ಯದಲ್ಲಿ ಸಿಲುಕಿಕೊಂಡ ಚೀನಾದ 3 ವರ್ಷದ ಪುಟ್ಟ ಬಾಲಕ ಅಗ್ನಿಶಾಮಕ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ ಪರಿಣಾಮವಾಗಿ ಸಾವಿನಿಂದ ಪಾರಾಗಿದ್ದಾನೆ. ಈ ಕಾರ್ಯಾಚರಣೆಯ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಕಾರ್ಯಚರಣೆಯಲ್ಲಿ ತೊಡಗಿದ್ದವರ ಪ್ರಯತ್ನ ಎದ್ದು ಕಾಣುತ್ತದೆ.

ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕ 90 ಮೀಟರ್ ಆಳದ ಕೊಳವೆ ಬಾವಿಯಲ್ಲಿ ಬಿದ್ದಿದ್ದಾನೆ. ಅದೃಷ್ಟವಶಾತ್ 11 ಮೀಟರ್ ಆಳದಲ್ಲಿ ಸಿಲುಕಿಕೊಂಡಿದ್ದು, ಎರಡು ಗಂಟೆಗಳ ಚುರುಕಿನ ಕಾರ್ಯಾಚರಣೆ ಬಳಿಕ ಬಾಲಕನನ್ನು ಹೊರಕ್ಕೆ ತರಲು ಸಾಧ್ಯವಾಯಿತು.

ಸಣ್ಣ ಪುಟ್ಟ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರೀಕ್ಷೆ ನಡೆಸಿ ಬಾಲಕ ಸುರಕ್ಷಿತವಾಗಿದ್ದಾನೆ ಎಂದು ದೃಢಪಡಿಸಿದ್ದಾರೆ.

SCROLL FOR NEXT