ಡೇಟಿಂಗ್ ವೆಬ್ ಸೈಟ್ ಮತು ಜಿಹಾದಿ ವಧು (ಸಂಗ್ರಹ ಚಿತ್ರ) 
ವಿದೇಶ

ಜಿಹಾದಿ ನೇಮಕಾತಿಗೆ ಇಸಿಸ್ ನಿಂದ ಡೇಟಿಂಗ್ ವೆಬ್ ಸೈಟ್ ಬಳಕೆ!

ಸಿರಿಯಾ ಮತ್ತು ಇರಾಕ್ ನಲ್ಲಿ ತನ್ನ ಕದಂಬಬಾಹು ಚಾಚಿರುವ ವಿಶ್ವದ ಶ್ರೀಮಂತ ಉಗ್ರಗಾಮಿ ಸಂಘಟನೆ ಇಸಿಸ್, ಇದೀಗ ತನ್ನ ಜಿಹಾದಿ ನೇಮಕಾತಿಗಾಗಿ ಡೇಟಿಂಗ್ ವೆಬ್ ಸೈಟ್ ಗಳನ್ನು ಬಳಕೆ ಮಾಡುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ನ್ಯೂಯಾರ್ಕ್: ಸಿರಿಯಾ ಮತ್ತು ಇರಾಕ್ ನಲ್ಲಿ ತನ್ನ ಕದಂಬಬಾಹು ಚಾಚಿರುವ ವಿಶ್ವದ ಶ್ರೀಮಂತ ಉಗ್ರಗಾಮಿ ಸಂಘಟನೆ ಇಸಿಸ್, ಇದೀಗ ತನ್ನ ಜಿಹಾದಿ ನೇಮಕಾತಿಗಾಗಿ ಡೇಟಿಂಗ್ ವೆಬ್  ಸೈಟ್ ಗಳನ್ನು ಬಳಕೆ ಮಾಡುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ನೇಮಕಾತಿ ವಿಭಾಗದ ಉಗ್ರರು ಸಂಘಟನೆಯತ್ತ ಯುವತಿಯರನ್ನು ಸೆಳೆಯಲು ಈ ವಾಮಮಾರ್ಗವನ್ನು ಅನುಸರಿಸುತ್ತಿದ್ದು,  ಡೇಟಿಂಗ್ ಸೈಟನಲ್ಲಿ ತನ್ನ ಉಗ್ರರನ್ನು ಮದುವೆಯಾಗುವಂತೆ ಯುವತಿಯರಿಗೆ ಒತ್ತಾಯಿಸುತ್ತಿದೆಯಂತೆ. ಇತ್ತೀಚೆಗೆ ಡೇಟಿಂಗ್ ಸೈಟ್ ನಲ್ಲಿ ಯುವತಿಯೊಬ್ಬಳು ಸರ್ಚಿಂಗ್ ನಲ್ಲಿದ್ದಾಗ  ಆಕೆಯೊಂದಿಗೆ ಇಸಿಸ್ ಉಗ್ರಗಾಮಿ ಸಂಘಟನೆಯ ನೇಮಕಾತಿ ವಿಭಾಗದ ಉಗ್ರನೊಬ್ಬ ಚಾಟಿಂಗ್ ಮಾಡಿದ್ದು, ಉಗ್ರ ಸಂಘಟನೆಯ ಕಪಿಮುಷ್ಠಿಯಲ್ಲಿರುವ ಸಿರಿಯಾದ ರಖ್ಖಾದಲ್ಲಿ ನೆಲೆಸಿರುವ  ಉಗ್ರನನ್ನು ಮದುವೆಯಾಗುವಂತೆ ಆಹ್ವಾನ ನೀಡಿದ್ದಾನೆ. ಅಲ್ಲದೆ ಇದಕ್ಕೆ ಯುವತಿ ಕುಟುಂಬ ಪ್ರತಿಕ್ರಿಯೆ ನೀಡದಿದ್ದರಿಂದ ಆಕೆಯ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಿರಿಯಾದ  ರಕ್ಷಣಾ ಇಲಾಖೆ ತಿಳಿಸಿದೆ.

‘ನೀವು ದೊಡ್ಡ ಬಂಗಲೆಗಳಲ್ಲಿ ಉಳಿದುಕೊಳ್ಳಬಹುದು, ನಿಮ್ಮ ಸೇವೆ ಮಾಡಲು ನೂರಾರು ಮಂದಿ ಸೇವಕರಿರುತ್ತಾರೆ. ನೀವು ಮದುವೆಯಾಗಲಿರುವ ಹುಡುಗ ಅತ್ಯುತ್ತಮ ಯೋಧನಾಗಿದ್ದು,  ಬೆಲೆಬಾಳುವ ಆಭರಣಗಳು ನಿಮ್ಮದಾಗಲಿವೆ’ ಎಂದು ಇಸಿಸ್ ನೇಮಕಾತಿ ಘಟಕ ಆಮಿಷ ಒಡ್ಡಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಕೆಲ ಹೆಚ್ಚು ಬೆಲೆ ಬಾಳುವ ಆಭರಣಗಳ ಫೋಟೋವನ್ನು  ಯುವತಿಗೆ ಕಳುಹಿಸಿ ನೀನು ಆತನನ್ನು ವರಿಸಿದರೆ ಇದೆಲ್ಲಾ ನಿನ್ನದಾಗುತ್ತದೆ ಎಂದು ಆಮಿಷ ಒಡ್ಡಲಾಗಿದೆ ಎಂದು ಯುವತಿ ಕುಟುಂಬಸ್ಥರು ತಳಿಸಿದ್ದಾರೆ.

ಒಟ್ಟಾರೆ ತನ್ನ ಉಗ್ರ ಸೇನೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಉಗ್ರಗಾಮಿ ಸಂಘಟನೆ ಡೇಟಿಂಗ್ ವೆಬ್ ಸೈಟ್ ಗಳ ಮೂಲಕ ಆಮಿಷ ಒಡ್ಡುವ ವಾಮಮಾರ್ಗವನ್ನು ಅನುಸರಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT