ಇರಾನ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ 
ವಿದೇಶ

ಭಾರತ-ಇರಾನ್ ನಡುವಿನ ಚಾಬಾಹರ್ ಬಂದರು ಒಪ್ಪಂದಕ್ಕೆ ಅಫ್ಘಾನಿಸ್ತಾನ ಮಾಧ್ಯಮಗಳ ಪ್ರಶಂಸೆ

ಭಾರತ- ಇರಾನ್ ನಡುವಿನ ನಡೆದಿರುವ ಚಾಬಹಾರ್ ಬಂದರು ಒಪ್ಪಂದ ಯಶಸ್ವಿಯಾಗಿರುವುದನ್ನು ಅಫ್ಘಾನಿಸ್ತಾನ ಮಾಧ್ಯಮಗಳು ಪ್ರಶಂಸಿಸಿವೆ.

ಕಾಬೂಲ್: ಭಾರತ- ಇರಾನ್ ನಡುವಿನ ನಡೆದಿರುವ ಚಾಬಹಾರ್ ಬಂದರು ಒಪ್ಪಂದ ಯಶಸ್ವಿಯಾಗಿರುವುದನ್ನು ಅಫ್ಘಾನಿಸ್ತಾನ ಮಾಧ್ಯಮಗಳು ಪ್ರಶಂಸಿಸಿವೆ.
ಬಂದರು ನಿರ್ಮಾಣ ಒಪ್ಪಂದ ಯಶಸ್ವಿಯಾಗಿರುವುದು ಭಾರತ-ಇರಾನ್- ಅಫ್ಘಾನಿಸ್ತಾನ ಪ್ರದೇಶದಲ್ಲಿ ವ್ಯಾಪಾರ, ಆರ್ಥಿಕ ಸಹಕಾರಕ್ಕೆ ಪೂರಕವಾಗಿರಲಿದೆ ಎಂದು ಅಫ್ಘಾನಿಸ್ತಾನ ಮಾಧ್ಯಮಗಳು ಸಂಪಾದಕೀಯದಲ್ಲಿ  ಒಪ್ಪಂದವನ್ನು ಬಣ್ಣಿಸಿವೆ.
ಚಾಬಹಾರ್ ಒಪ್ಪಂದದಿಂದಾಗಿ ಭಾರತದ ಸಮುದ್ರ ಮಾರ್ಗದ ಮೂಲಕ ಮಧ್ಯಪ್ರಾಚ್ಯವನ್ನು ಸಂರ್ಪಸುವುದರಲ್ಲಿ ಅಫ್ಘಾನಿಸ್ತಾನ ಪ್ರಮುಖ ಪಾತ್ರ ವಹಿಸಲಿದೆ, ಅಷ್ಟೇ ಅಲ್ಲದೇ ಸರಕುಗಳನ್ನು ಸಾಗಿಸಲು ಪಾಕಿಸ್ತಾನದ ಕರಾಚಿ ಬಂದರಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ ಎಂದು ಡೈಲಿ ಅಫ್ಘಾನಿಸ್ತಾನ್ ಪತ್ರಿಕೆ ಸಂಪಾದಕೀಯದಲ್ಲಿ ಬರೆದಿದೆ.
ಇರಾನ್​ನ ಚಾಬಹಾರ್ ಪ್ರದೇಶ ಸಮುದ್ರ ತೀರದಲ್ಲಿರುವ ಕಾರಣ ಚಾಬಹಾರ್ ಬಂದರು ನಿರ್ಮಾಣದಿಂದ, ಇರಾನ್ ಮೂಲಕ ಅಫ್ಘಾನಿಸ್ತಾನ ಹಾಗೂ ಮಧ್ಯಪ್ರಾಚ್ಯ ದೇಶಗಳನ್ನು ಭಾರತ ಸುಲಭವಾಗಿ ಸಂರ್ಪಸಬಹುದು. ಚಾಬಹಾರ್ ಬಂದರಿಗೆ ಗುಜರಾತ್ ಹಾಗೂ ಮಹಾರಾಷ್ಟ್ರ ಕಡಲತೀರ ಸಾಕಷ್ಟು ಸನಿಹದಲ್ಲಿರುವ ಕಾರಣ ಸರಕು ಸಾಗಾಣಿಕೆ ವೆಚ್ಚ ಹಾಗೂ ಸಮಯ ಉಳಿತಾಯವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT