ಅಣ್ವಸ್ತ್ರ ಕ್ಷಿಪಣಿ 
ವಿದೇಶ

ಪಾಕ್‌ಗೆ ಚೀನಾ ಅಣ್ವಸ್ತ್ರ ಪೂರೈಕೆ: ಭಾರತ, ಅಮೆರಿಕ ಸೇರಿ ಏಷ್ಯಾ ರಾಷ್ಟ್ರಗಳಿಗೆ ಆತಂಕ

ಪಾಕಿಸ್ತಾನಕ್ಕೆ ಅಣ್ವಸ್ತ್ರ ತಂತ್ರಜ್ಞಾನಗಳನ್ನು ಚೀನಾ ನೀಡುತ್ತಿದ್ದು, ಇದರಿಂದ ಅಮೆರಿಕ ಮತ್ತು ಭಾರತಕ್ಕೆ ಭದ್ರತಾ ಆತಂಕ ಎದುರಾಗಿದೆ ಎಂದು...

ವಾಷಿಂಗ್ಟನ್: ಪಾಕಿಸ್ತಾನಕ್ಕೆ ಅಣ್ವಸ್ತ್ರ ತಂತ್ರಜ್ಞಾನಗಳನ್ನು ಚೀನಾ ನೀಡುತ್ತಿದ್ದು, ಇದರಿಂದ ಅಮೆರಿಕ ಮತ್ತು ಭಾರತಕ್ಕೆ ಭದ್ರತಾ ಆತಂಕ ಎದುರಾಗಿದೆ ಎಂದು ಅಮೆರಿಕ ಸಂಸತ್ ಸದಸ್ಯರು ಬರಾಕ್ ಒಬಾಮ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಚೀನಾ ಈಗಾಗಲೇ ಕ್ಷಿಪಣಿ ಉಡಾಹಕಗಳನ್ನು ನೀಡಿದ್ದು ಇದು ಪಾಕಿಸ್ತಾನ ಖಂಡಾಂತರ ಕ್ಷಿಪಣಿಗಳ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಪಾಕ್ 2015ರಲ್ಲಿ ಜೇಲಂನ ತಿಲ್ಲಾ ಪರೀಕ್ಷಾ ಕೇಂದ್ರದಲ್ಲಿ ಇದರ ಪರೀಕ್ಷೆ ನಡೆಸಿದೆ.

ಚೀನಾದ 8x8 ಕ್ಷಿಪಣಿ ಉಡಾಹಕಗಳನ್ನು ಪಾಕಿಸ್ತಾನ ಸೇನೆ ಬಳಸುತ್ತಿದೆ. ಇವು ರಷ್ಯಾದ ಎಂಎಝಡ್ 543 ಮತ್ತು ಎಂಎಝಡ್ 7310ಗೆ ಸರಿಸಮನಾದ ಸಾಮರ್ಥ್ಯ ಹೊಂದಿದೆ. ಇವುಗಳ ಮೂಲಕ ಅಣು ಬಾಂಬ್ ದಾಳಿಯನ್ನು ನಡೆಯಬಹುದಾಗಿದೆ ಎಂದು ಸಂಸತ್ ಸದಸ್ಯರು ಎಚ್ಚರಿಸಿದ್ದಾರೆ.

ಚೀನಾ ನೀಡುತ್ತಿರುವ ಸಹಕಾರದಿಂದ ಪಾಕಿಸ್ತಾನ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಾಗುತ್ತಿದೆ. ಇದರಿಂದ ಭಾರತ, ಆಫ್ಘಾನಿಸ್ತಾನ ಸೇರಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಮೇಲೆ ಪಾಕ್ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇದು ಏಷ್ಯಾದ ಹಲವು ರಾಷ್ಟ್ರಗಳಿಗೆ ಆತಂಕ ತಂದಿದೆ. ಪಾಕಿಸ್ತಾನದ ಶಾಹೀನ್ 3 ಖಂಡಾಂತರ ಕ್ಷಿಪಣಿ ಭಾರತಕ್ಕೆ ಹೆಚ್ಚು ಅಪಾಯಕಾರಿ ಎಂದು ಅಮೆರಿಕ ಸಂಸತ್ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜತಾಂತ್ರಿಕತೆ: ಮೂರು ದಿನಗಳಲ್ಲಿ 15 ದ್ವಿಪಕ್ಷೀಯ ಸಭೆಗಳು; ಕ್ಸಿ ಜಿನ್ ಪಿಂಗ್, ವ್ಲಾಡಿಮಿರ್ ಪುಟಿನ್, ಪೆಜೆಶ್ಕಿಯಾನ್ ಮಾತುಕತೆ

ದೇವಸ್ಥಾನದಲ್ಲಿ ಮೀನು ತಿಂದ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾಗೆ ತಿರುಗೇಟು; CM ಮಾಂಸಾಹಾರ ಸೇವನೆ ಬಗ್ಗೆ ಬಿಜೆಪಿ ಹೇಳಿದ್ದೇನು? Video

ಬ್ರಿಕ್ಸ್ ಶೃಂಗಸಭೆಗಳಿಂದ ಭಾರತಕ್ಕೆ ಲಾಭವೇನು ಇಲ್ಲ: ಚಿದಂಬರಂ ಹೇಳಿಕೆಗೆ ತರೂರ್ ತಿರುಗೇಟು! ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಂಗ್ಯ

ನಮ್ಮದು ವರ್ಷಕ್ಕೆ 2 ಸಾವಿರ ಕೋಟಿ ವಹಿವಾಟು ಇದೆ, 2 ಕೋಟಿ ನಗದು ದೊಡ್ಡ ಮೊತ್ತವೇ ಅಲ್ಲ: ಸತೀಶ್‌ ಜಾರಕಿಹೊಳಿ

'ವಂದೇ ಮಾತರಂ' ವಿವಾದದ ನಡುವೆ BJP, RSS ಹಾದಿಯಲ್ಲಿ NC: ಸ್ವಪಕ್ಷದ ವಿರುದ್ಧವೇ ಸಂಸದ ರುಹುಲ್ಲಾ ಗಂಭೀರ ಆರೋಪ