ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ತಮ್ಮ ಪತಿ ಬಿಲ್ ಕ್ಲಿಂಟನ್ ಮತ್ತು ಅಧ್ಯಕ್ಷ ಬರಾಕ್ ಒಬಾಮಾ ಜೊತೆ.
ಡಿಕ್ಸ್ ವಿಲ್ಲೆ: 2016ನೇ ಸಾಲಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಪದವಿ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಮುಂಚೂಣಿಯಲ್ಲಿದ್ದು, ಡಿಕ್ಸ್ ವಿಲ್ಲೆ, ನ್ಯೂ ಹ್ಯಾಂಪ್ ಶೈರ್ ಪಟ್ಟಣದಲ್ಲಿ ನಡೆದ ಆರಂಭಿಕ ಮತ ಚಲಾವಣೆಯಲ್ಲಿ 4-2ರ ಅಂತರದಲ್ಲಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುಂಚೂಣಿಯಲ್ಲಿದ್ದಾರೆ.
ಹಿಲರಿ ಕ್ಲಿಂಟನ್ ಅವರು ಡಿಕ್ಸ್ ವಿಲ್ಲೆ ಕ್ಷೇತ್ರದ ಅರ್ಧದಷ್ಟು ಮತಗಳನ್ನು ಗೆದ್ದುಕೊಂಡರೆ ಲಿಬರ್ಟೇರಿಯನ್ ಪಕ್ಷದ ಗೇರಿ ಜಾನ್ಸನ್ ಒಂದು ಮತ್ತು 2012ರ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಮಿಟ್ ರಾಮ್ನಿ ಬರಹ ಮತಗಳನ್ನು ಪಡೆದುಕೊಂಡರು.
ಇಂದು ಮಧ್ಯರಾತ್ರಿ ನ್ಯೂ ಹ್ಯಾಂಪ್ ಶೈರ್ ಪಟ್ಟಣದಲ್ಲಿ ಮತ ಚಲಾವಣೆ ನಡೆದು ಮತದಾರರು ಮತ ಚಲಾಯಿಸಿದ ನಂತರ ಮುಚ್ಚಿತ್ತು. ನ್ಯೂ ಹ್ಯಾಂಪ್ ಶೈರ್ ರಾಜ್ಯದ ಕಾನೂನಿನ ಪ್ರಕಾರ, 100ಕ್ಕೂ ಕಡಿಮೆ ಮತದಾರರನ್ನು ಹೊಂದಿರುವ ಸಮುದಾಯಗಳು ಮಧ್ಯ ರಾತ್ರಿ ಮತ ಕೇಂದ್ರಗಳನ್ನು ತೆರೆದು ಎಲ್ಲರೂ ಮತ ಹಾಕಿದ ನಂತರ ಮುಚ್ಚಬಹುದು ಎಂಬ ನಿಯಮವಿದೆ.