ಸಂಗ್ರಹ ಚಿತ್ರ 
ವಿದೇಶ

ಟ್ರಂಪ್ ಕೆಟ್ಟ ನಡತೆಯ ವ್ಯಕ್ತಿ, ಆತನಿಂದ ಮುಸ್ಲಿಂರಿಗೆ ಬೆದರಿಕೆ ಇದೆ: ಜೈಷ್ ಇ ಮೊಹಮದ್

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಟ್ಟ ನಡತೆಯ ವ್ಯಕ್ತಿಯಾಗಿದ್ದು, ಆತನಿಂದ ವಿಶ್ವದ ಮುಸ್ಲಿಮರಿಗೆ ಸದಾಕಾಲ ಬೆದರಿಕೆ ಇರುತ್ತದೆ ಎಂದು ಕುಖ್ಯಾತ ಉಗ್ರಗಾಮಿ ಸಂಘಟನೆ ಜೈಷ್ ಇ ಮೊಹಮದ್ ಹೇಳಿದೆ.

ಇಸ್ಲಾಮಾಬಾದ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಟ್ಟ ನಡತೆಯ ವ್ಯಕ್ತಿಯಾಗಿದ್ದು, ಆತನಿಂದ ವಿಶ್ವದ ಮುಸ್ಲಿಮರಿಗೆ ಸದಾಕಾಲ ಬೆದರಿಕೆ ಇರುತ್ತದೆ ಎಂದು ಕುಖ್ಯಾತ ಉಗ್ರಗಾಮಿ ಸಂಘಟನೆ ಜೈಷ್ ಇ ಮೊಹಮದ್  ಹೇಳಿದೆ.

ಬುಧವಾರ ಪಾಕಿಸ್ತಾನದಲ್ಲಿರುವ ತನ್ನ ಹಿಂಬಾಲಕರಿಗೆ ಸಂದೇಶ ರವಾನಿಸಿರುವ ಜೆಇಎಮ್, ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದೆ. ತನ್ನ ಮುಖವಾಣಿ ಅಲ್ ಕಲಮ್ ನಲ್ಲಿ ಈ ಬಗ್ಗೆ  ಉಲ್ಲೇಖ ಮಾಡಿರುವ ಜೆಇಎಂ, ಮುಸ್ಲಿಮರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದಲೇ ಅಂತಾರಾಷ್ಟ್ರೀಯ ಮಾಧ್ಯಗಳು ಟ್ರಂಪ್ ಗೆಲುವನ್ನು ವಿಜೃಂಭಣೆಯಿಂದ ವರದಿ ಮಾಡುತ್ತಿವೆ. ಸ್ವತಃ ಅಮೆರಿಕವೇ ಟ್ರಂಪ್ ಗೆಲುವನ್ನು  ನಿರ್ಲಕ್ಷಿಸಿದ್ದರೂ, ವಿಶ್ವದ ಇತರೆ ದೇಶಗಳು ಮಾತ್ರ ಟ್ರಂಪ್ ಜಯವನ್ನು ವಿಜೃಂಭಣೆಯಿಂದ ವರದಿ ಮಾಡುತ್ತಿವೆ ಎಂದು ಹೇಳಿದೆ.

ಇನ್ನು ಟ್ರಂಪ್ ಅವರದ್ದು ಕೆಟ್ಟ ನಡತೆಯಾಗಿದ್ದು, ಎಂದಿಗೂ ಆತ ಮುಸ್ಲಿಮರಿಗೆ ಬೆದರಿಕೆಯೇ. ಆತ ಭಾವನಾತ್ಮಕ ಮತ್ತು ಉದ್ವೇಗಿಯಾಗಿದ್ದು, ಮುಸ್ಲಿಂ ಮತ್ತು ಇಸ್ಲಾಂ ಧರ್ಮದ ವಿರೋಧಿ. ಭಯೋತ್ಪಾದನೆಯ ವಿರುದ್ಧ ಹೋರಾಟದ  ಹೆಸರಲ್ಲಿ ಆತ ಮುಸ್ಲಿಮರ ವಿರುದ್ಧ ಯುದ್ಧ ಸಾರಿದ್ದ. ಇದು ಆತನ ಹಲವು ಭಾಷಣಗಳಿಂದ ಸ್ಪಷ್ಟವಾಗುತ್ತದೆ. ಅಮೆರಿಕ ಅಧೀನದಲ್ಲಿರುವ ಮುಸ್ಲಿಂ ರಾಷ್ಟ್ರಗಳ ನಾಯಕರನ್ನು ಬದಲಿಸುವ ಮೂಲಕ ಜಿಹಾದ್ ಗೆ ಬಲ ನೀಡಬೇಕಿದೆ ಎಂದು  ಜೆಇಎಂ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ