ರಾಯಿಟರ್ಸ್ ಚಿತ್ರ 
ವಿದೇಶ

ಇರಾನ್ ನಲ್ಲಿ ಭೀಕರ ರೈಲು ದುರಂತ; 44 ಮಂದಿ ಸಾವು, 103 ಮಂದಿಗೆ ಗಾಯ

ಇರಾನ್ ರಾಜಧಾನಿ ತೆಹ್ರಾನ್ ನಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು, ದುರಂತದಲ್ಲಿ ಈ ವರೆಗೂ ಕನಿಷ್ಠ 44 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ತೆಹ್ರಾನ್: ಇರಾನ್ ರಾಜಧಾನಿ ತೆಹ್ರಾನ್ ನಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು, ದುರಂತದಲ್ಲಿ ಈ ವರೆಗೂ ಕನಿಷ್ಠ 44 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇರಾನ್ ನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ ತೆಹ್ರಾನ್ ನ 150 ಕಿ.ಮೀ ದೂರದಲ್ಲಿ ರೈಲು ದುರಂತ ಸಂಭವಿಸಿದ್ದು, ಹಳಿ ತಪ್ಪಿದ ರೈಲು ನೇರ ಸಮೀಪದ ಹಫ್ತ್ ಖಾನ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ  ಹೊಡೆದ ರಭಸಕ್ಕೆ ಮೂರು ಬೋಗಿಗಳಿಗೆ ಬೆಂಕಿ ಹೊತ್ತಿದ್ದು, ಪರಿಣಾಮ ಸುಮಾರು 44 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ 103 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಸೈನಿಕ ಆಸ್ಪತ್ರೆಗೆ  ರಾವಾನಿಸಲಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ಹೊತ್ತಿರುವ ಬೋಗಿಗಳನ್ನು ನಂದಿಸುತ್ತಿದ್ದಾರೆ. ದುರಂತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು  ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರಂಭದಲ್ಲಿ ಎಲ್ಲರೂ ಇದನ್ನು ವಾಯುದಾಳಿಯಾಗಿರಬಹುದು ಎಂದು ಶಂಕಿಸಿದ್ದರಾದರೂ ಬಳಿಕ ಇದು ರೈಲು ಅಪಘಾತ ಎಂದು ಸ್ಪಷ್ಟವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!