ವಿದೇಶ

ಪಾಕ್ ನೊಂದಿಗೆ 16 ರಾಷ್ಟ್ರಗಳ ಸಮರಾಭ್ಯಾಸ!

Srinivas Rao BV

ಲಾಹೋರ್: ಪಾಕಿಸ್ತಾನದೊಂದಿಗೆ 16 ರಾಷ್ಟ್ರಗಳು ಸಮರಾಭ್ಯಾಸ ನಡೆಸಲು ಸಿದ್ಧವಾಗಿವೆ.
ಅಕ್ಟೊಬರ್ 18 ರಿಂದ ಪಾಕಿಸ್ತಾನದೊಂದಿಗೆ 16 ರಾಷ್ಟ್ರಗಳು ಸಮರಾಭ್ಯಾಸ ನಡೆಸಲಿದ್ದು ಶ್ರೀಲಂಕಾದಿಂದ ಈಗಾಗಲೇ 25 ಸದಸ್ಯರ ಸೇನಾ ತುಕಡಿ ಲಾಹೋರ್ ಗೆ ಬಂದಿಳಿದಿದೆ. ಸಮರಾಭ್ಯಾಸದ ಬಗ್ಗೆ ಮಾಹಿತಿ ನೀಡಿರುವ ಐಎಸ್ ಪಿಆರ್, ಸೇನೆಯ ದೈಹಿಕ ಹಾಗೂ ಸೇನಾ ಸಾಮರ್ಥ್ಯಗಳನ್ನು ಹೆಚ್ಚಿಸುವುದಕ್ಕಾಗಿ 16 ರಾಷ್ಟ್ರಗಳೊಂದಿಗೆ ಸಮರಾಭ್ಯಾಸ ನಡೆಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದೆ.   
ಸೆ.27 ರಂದು ಪ್ರಾರಂಭವಾಗಿದ್ದ ಪಾಕ್- ರಷ್ಯಾ ಜಂಟಿ ಸಮಾರಾಭ್ಯಾಸ ಅಕ್ಟೊಬರ್ 10 ಕ್ಕೆ ಮುಕ್ತಾಯಗೊಂಡಿದೆ.

SCROLL FOR NEXT