ವಿದೇಶ

ಪಾಕ್ ಅಪಘಾತದಲ್ಲಿ 30 ಸಾವು

Lingaraj Badiger
ಇಸ್ಲಾಮಾಬಾದ್: ಅಂತರ್ ನಗರ ಬಸ್ ಗಳ ನಡುವೆ ಸೋಮವಾರ ಮುಖಾಮುಖಿ ಡಿಕ್ಕಿ ಸಂಭವಿ ಕನಿಷ್ಠ 30 ಜನ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾನಾಪುರ ಪ್ರದೇಶದಲ್ಲಿ ಈ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ 55ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿರುವುದಾಗಿ ಡಾನ್ ಆನ್ ಲೈನ್ ವರದಿ ಮಾಡಿದೆ.
ಕರಾಚಿಯಿಂದ ಲಾಹೋರ್ ತೆರಳುತ್ತಿದ್ದ ಬಸ್ ಫೈಸಲಾಬಾದ್ ನಿಂದ ಸಾದಿಖ್ ಬಾದ್ ಗೆ ತೆರಳುತ್ತಿದ್ದ ಮತ್ತೊಂದು ಬಸ್ ಗೆ ಡಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂಧಿ ಧಾವಿಸಿದ್ದು, ಬಸ್ ಗಳನ್ನು ಕಟ್ ಮಾಡಿ ಮೃತದೇಹಳನ್ನು ಹೊರತೆಗೆಯಲಾಗುತ್ತಿದೆ ಮತ್ತು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT