ಅಮೆರಿಕ ಅಧ್ಯಕ್ಷರ ವೈಯಕ್ತಿಕ ಇ-ಮೇಲ್ ಖಾತೆಗೂ ಕನ್ನ?
ಭಾರತದಲ್ಲಿ ಡೆಬಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆಯಾದ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್ ಅನ್ನು ಕೂಡ ಹ್ಯಾಕ್ ಮಾಡಲಾಗಿದೆ ಎಂದು ವಿಕಿಲೀಕ್ಸ್ ಸಂಸ್ಥೆ ಹೇಳಿದೆ.
ವಾಷಿಂಗ್ಟನ್: ಭಾರತದಲ್ಲಿ ಡೆಬಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆಯಾದ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್ ಅನ್ನು ಕೂಡ ಹ್ಯಾಕ್ ಮಾಡಲಾಗಿದೆ ಎಂದು ವಿಕಿಲೀಕ್ಸ್ ಸಂಸ್ಥೆ ಹೇಳಿದೆ.
ಈ ಬಗ್ಗೆ ಸ್ವತಃ ವಿಕಿಲೀಕ್ಸ್ ಸಂಸ್ಥೆ ಟ್ವೀಟ್ ಮಾಡಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್ ಹ್ಯಾಕ್ ಆಗಿದ್ದು, ಅವರ ಕೆಲ ವೈಯುಕ್ತಿಕ ಇಮೇಲ್ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಿದೆ. bobama@ameritech.net ನ ಕೆಲ ಮಹತ್ವದ ಟ್ವೀಟ್ ಗಳು ಸೋರಿಕೆಯಾಗಿದೆ ಎಂದು ವಿಕಿಲೀಕ್ಸ್ ಹೇಳಿದ್ದು, ಈ ಬಗ್ಗೆ ಕೆಲ ಇಮೇಲ್ ಗಳನ್ನು ಕೂಡ ವಿಕಿಲೀಕ್ಸ್ ಸಂಸ್ಥೆ ಜಾಹಿರು ಮಾಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.