ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಕೆಲವು ಫೇಸ್ಬುಕ್ ಸಿಬ್ಬಂದಿ ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಪೋಸ್ಟ್ ಗಳನ್ನು ತೆಗೆದುಹಾಕುವ ಇಂಗಿತವನ್ನು ವ್ಯಕ್ತಪಡಿಸಿದ್ದಾಗ, ಸಿಇಒ ಮಾರ್ಕ್ ಜಕರ್ಬರ್ಗ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯನ್ನು ಸೆನ್ಸಾರ್ ಮಾಡುವುದು ಉಚಿತವಲ್ಲ ಎಂದು ಆದೇಶಿಸಿದ್ದರು ಎಂದು ಶನಿವಾರ ಮಾಧ್ಯಮಗಳು ವರದಿ ಮಾಡಿವೆ.
"ಈ ನಿರ್ಧಾರದಿಂದ ಫೇಸ್ಬುಕ್ ಪೋಸ್ಟ್ ಗಳನ್ನು ಪರಿಶೀಲಿಸುವ ತಂಡ ಕೆಲಸ ಬಿಡುವ ಬೆದರಿಕೆಯನ್ನು ಹಾಕಿತ್ತು" ಎಂದು ವರದಿ ಹೇಳಿದೆ. ಅಮೆರಿಕಾಗೆ ಮುಸ್ಲಿಮರು ಬರುವುದನ್ನು ತಡೆಯಬೇಕು ಎಂಬ ಟ್ರಂಪ್ ಹೇಳಿಕೆ ಈ ವಿವಾದ ಸೃಷ್ಟಿಯಾಗಿತ್ತು.
ಕೆಲವು ಮುಸ್ಲಿಮರನ್ನು ಒಳಗೊಂಡಂತೆ ಬಹಳಷ್ಟು ಫೇಸ್ಬುಕ್ ಸಿಬ್ಬಂದಿ "ಇದು ಆಂತರಿಕ ಕಾರ್ಯಸೂಚಿಯ ಪ್ರಕಾರ ಫೇಸ್ಬುಕ್ ನ ನಿಯಮಗಳನ್ನು ಮುರಿದಿದೆ ಎಂದು ಮಾತನಾಡಿಕೊಂಡಿದ್ದರು" ಎಂದು ಕೂಡ ಪತ್ರಿಕೆ ವರದಿ ಮಾಡಿದೆ.
ಪರಿಶೀಲನಾ ತಂಡಕ್ಕೆ ಆ ಪೋಸ್ಟ್ ಅನ್ನು ತೆಗೆದು ಹಾಕದಂತೆ ಅವರ ಮೇಲಿನ ಅಧಿಕಾರಿಗಳು ಸೂಚಿಸಿದ್ದರು ಎಂದು ತಿಳಿದುಬಂದಿದೆ.
"ಅವರ ಸಿಬ್ಬಂದಿ ದೂರಿನ ಬಗ್ಗೆ ಫೇಸ್ಬುಕ್ ನಮ್ಮನ್ನು ಎಂದಿಗೂ ಸಂಪರ್ಕಿಸಲಿಲ್ಲ ಮತ್ತು ಪೋಸ್ಟ್ ಅನ್ನು ಅವರು ತೆಗೆದು ಹಾಕಲು ಇಲ್ಲ" ಎಂದು ಟ್ರಂಪ್ ಚುನಾವಣಾ ಪ್ರಚಾರದ ವಕ್ತಾರ ಹೇಳಿದ್ದಾರೆ.