ವಿದೇಶ

ಕಾಶ್ಮೀರ ವಿಷಯವನ್ನು ಭಾರತ ಮತ್ತು ಪಾಕಿಸ್ತಾನವೇ ಬಗೆಹರಿಸಿಕೊಳ್ಳಬೇಕು: ಬ್ರಿಟನ್

Shilpa D

ಲಂಡನ್: ಕಾಶ್ಮೀರದ ವಿಷಯದಲ್ಲಿ ಬ್ರಿಟನ್ ನಿಲುವು ಬದಲಾಗುವುದಿಲ್ಲ. ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಬ್ರಿಟನ್ ಪ್ರಧಾನ ಮಂತ್ರಿ ಥೆರೆಸಾ ಹೇಳಿದ್ದಾರೆ.

ಲಂಡನ್ ನ ಹೌಸ್ ಆಫ್ ಕಾಮನ್ ನಲ್ಲಿ ಪ್ರಧಾನ ಮಂತ್ರಿಗಳ ಪ್ರಶ್ನೋತ್ತರ ವೇಳೆಯಲ್ಲಿ ಸಂಸದ ಯಾಸ್ಮೀನ್ ಖುರೇಶಿ ಕಾಶ್ಮೀರ ಸಮಸ್ಯೆ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಥೆರೆಸಾ, ಕಾಶ್ಮೀರ ಸಮಸ್ಯೆಯನ್ನು ಎರಡು ದೇಶಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದು, ಆ ವೇಳೆ ಈ ವಿಷಯವಾಗಿ ಚರ್ಚಿಸುವುದಾಗಿ ಹೇಳಿದ್ದಾರೆ.

ನವೆಂಬರ್ 6 ರಿಂದ 8 ರವರೆಗೆ ಭಾರತ ಪ್ರವಾಸದ ವೇಳೆ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಈ ವಿಷಯವನ್ನು ಕಾಶ್ಮೀರ ವಿಷವನ್ನು ಅಜೆಂಡವಾಗಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ  ಆಯೋಜಿಸಿರುವ ಭಾರತ- ಯುಕೆ ತಂತ್ರಜ್ಞಾನ ಶೃಂಗ ಸಭೆಯನ್ನು ಉದ್ಘಾಟಿಸಲು ತಾವು ತೆರಳುತ್ತಿದ್ದು, ಭಾರತದಿಂದ ತೆರಳುವ ಮುನ್ನ ಪ್ರದಾನಿ ಮೋದಿ ಜೊತೆ ಕಾಶ್ಮೀರ ವಿಷಯ ಸಂಬಂಧ ಸಮಾಲೋಚಿಸುವುದಾಗಿ ತಿಳಿಸಿದ್ದಾರೆ.

ಪ್ರಧಾನಿ ಥೆರೆಸಾ ತಮ್ಮ ಜೊತೆ ಲಂಡನ್ ನ್ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರಗಳ ಸಚಿವರ ನಿಯೋಗವನ್ನು ಭಾರತಕ್ಕೆ ಕರೆದೊಯ್ಯಲಿದ್ದಾರೆ.

SCROLL FOR NEXT