ವಿದೇಶ

ಪಾಕಿಸ್ತಾನ ಲೋಕಸಭೆಯಲ್ಲಿ ಐತಿಹಾಸಿಕ ಹಿಂದೂ ವಿವಾಹ ಮಸೂದೆ ಅಂಗೀಕಾರ

Sumana Upadhyaya
ಇಸ್ಲಾಮಾಬಾದ್: ಮದುವೆ ನೋಂದಣಿ ಮಾಡಿಸಿಕೊಳ್ಳುವ ಹಕ್ಕನ್ನು ಹಿಂದು ಸಮುದಾಯದವರಿಗೆ ನೀಡಿ ಪಾಕಿಸ್ತಾನ ಲೋಕಸಭೆ ಮಹತ್ವದ ಮಸೂದೆಗೆ ಅಂಗೀಕಾರ ನೀಡಿದೆ.
ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಕಾನೂನು ಜಾರಿಗೆ ತರುವಲ್ಲಿ ಇದ್ದ ಪ್ರಮುಖ ಅಡೆತಡೆ ಈ ಮೂಲಕ ನಿವಾರಣೆಯಾಗಿದೆ.ಅಪಹರಣ, ಬಲವಂತದ ಮತಾಂತರ ಮತ್ತು ಅತ್ಯಾಚಾರದಂತಹ ಪ್ರಕರಣಗಳಲ್ಲಿ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ನಲುಗಿ ಹೋಗಿದ್ದರು. ಅವರ ಮದುವೆಗಳನ್ನು ಯಾವತ್ತೂ ಅಧಿಕೃತವಾಗಿ ಗುರುತಿಸಿರಲಿಲ್ಲ. ಹೀಗಾಗಿ ಅದು ನ್ಯಾಯಾಲಯದಲ್ಲಿ ಸಾಕ್ಷ್ಯವಾಗುತ್ತಿರಲಿಲ್ಲ. ಕೇಸುಗಳು ರದ್ದಾಗುತ್ತಿದ್ದವು. 
ಈಗ ಇದಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನ ಲೋಕಸಭೆ ಸೋಮವಾರ 10 ತಿಂಗಳ ಚರ್ಚೆ ಬಳಿಕ ಮಸೂದೆಗೆ ಒಪ್ಪಿಗೆ ನೀಡಿದೆ. ಪಾಕಿಸ್ತಾನ ಸೆನೆಟ್ ವಿಳಂಬ ಮಾಡದೆ ಅನುಮೋದನೆ ನೀಡುವ ಸಾಧ್ಯತೆಯಿದೆ.
ಪಾಕಿಸ್ತಾನದಲ್ಲಿನ 190 ದಶಲಕ್ಷ ಜನರಲ್ಲಿ ಹಿಂದೂಗಳು ಶೇಕಡಾ 1.6ರಷ್ಟಿದ್ದಾರೆ. ಸ್ವಾತಂತ್ರ್ಯ ಸಿಕ್ಕಿದಾಗಿನಿಂದಲೂ ಅವರಿಗೆ ಅವರ ಮದುವೆ ನೋಂದಣಿ ಮಾಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿರಲಿಲ್ಲ.
ಹೊಸ ಕಾನೂನಿನಲ್ಲಿ ಹಿಂದೂಗಳಿಗೆ ಮದುವೆಯ ವಯಸ್ಸನ್ನು 18ಕ್ಕೆ ನಿಗದಿಪಡಿಸಲಾಗಿದೆ. 
SCROLL FOR NEXT