ವಿಶ್ವ ಭೂ ದಿನ ಪ್ರಯುಕ್ತ ಗೂಗಲ್'ನಿಂದ ವಿಶೇಷ ಡೂಡಲ್
ನವದೆಹಲಿ: ಸರ್ಚ್ ಇಂಜಿನ್ ದೈತ್ಯ ಗೂಗಲ್ ಭೂ ದಿನ ಪ್ರಯುಕ್ತ ವಿಶೇಷ ಅನಿಮೇಟೆಡ್ ಡೂಡಲ್ ಬಿಡಿಸಿದೆ.
ಪ್ರತೀ ವರ್ಷ ವಿಶ್ವ ಭೂ ದಿನವನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಗೆ ಬೆಂಬಲ ಪಡೆಯುವ ಸಲುವಾಗಿ ವಿಶ್ವದಾದ್ಯಂತ ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಸಾಮಾಜಿಕ ಹಾಗೂ ಪರಿಸರಾತ್ಮಕ ಸಂಬಂಧವನ್ನು ಪ್ರಕೃತಿಯ ಜತೆಗೆ ಹೊಂದುವಂತೆ ಸಾಮರಸ್ಯ ಮೂಡಿಸುವ ಉದ್ದೇಶದಿಂದ 1970ರಿಂದ ವಿಶ್ವ ಭೂ ದಿನವನ್ನು ಆಚರಿಸಲಾಗುತ್ತಿದೆ.
ಸೌರಮಂಡಲದಲ್ಲಿ 5ನೇ ಅತೀ ದೊಡ್ಡ ಗ್ರಹವಾಗಿರುವ ಭೂಮಿ 4,543 ಬಿಲಿಯನ್ ವರ್ಷಕ್ಕಿಂತಲೂ ಹಳೆಯದಾಗಿದೆ. ಭೂಮಿಯ ಒಡಲಲ್ಲಿ 8.7 ಮಿಲಿಯನ್ ಗಿಂದಲೂ ಹೆಚ್ಚು ಜೀವಿಗಳು ವಾಸವಿದೆ. ಜೀವಿಸುವುದಕ್ಕೆ ಅತ್ಯಂತ ಯೋಗ್ಯವಾದ ಗ್ರಹವೆಂದರೆ, ಅದು ಭೂಮಿ ಮಾತ್ರ.
ಈ ಹಿನ್ನಲೆಯಲ್ಲಿ ಭೂಮಿ ಮಹತ್ವವನ್ನು ತಿಳಿಸುವ ಸಲುವಾಗಿ ಗೂಗಲ್ ಡೂಡಲ್ ವಿಶೇಷ ಅನಿಮೇಟೆಡ್ ಚಿತ್ರಗಳನ್ನು ಬಿಡಿಸಿದೆ. ಸರಣಿಯಾಗಿ ಒಟ್ಟು 12 ಅನಿಮೇಟೆಡ್ ಚಿತ್ರಗಳನ್ನು ಬಿಡಿಸಲಾಗಿದ್ದು, ಮಲಗಿದ ನರಿಯೊಂದು ಹವಾಮಾನ ಬದಲಾವಣೆ ಬಗ್ಗೆ ಕೆಟ್ಟ ಕನಸ್ಸೊಂದನ್ನು ಕಾಣುಪತ್ತದೆ. ಕೂಡಲೇ ತನ್ನಿಬ್ಬರ ಗೆಳೆಯರೊಂದಿಗೆ ಮಾತುಕತೆ ನಡೆಸುವ ನರಿ ಭೂಮಿಯನ್ನು ಹೇಗೆ ರಕ್ಷಣೆ ಮಾಡಬೇಕೆಂಬುದನ್ನು ವಿವರಿಸುತ್ತದೆ. ಇದಲ್ಲದೆ, ಜೀವಿಸಲು ಉತ್ತಮವಾಗಿರುವ ಗ್ರಹವನ್ನು ಮತ್ತಷ್ಟು ಉತ್ತಮ ಸ್ಥಳವನ್ನಾಗಿಸೋಣ, ಜನರೂ ಕೂಡ ಹೆಚ್ಚಾಗಿ ಪರಿಸರ ಪ್ರೇಮಿಗಳಾಗಿರಬೇಕೆಂಬ ಸಂದೇಶವನ್ನೂ ನೀಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics