ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

1.2 ಬಿಲಿಯನ್ ಡಾಲರ್ ನೆರವಿನಿಂದ ಪಾಕಿಸ್ತಾನದ ನೆರವಿಗೆ ಧಾವಿಸಿದ ಚೀನಾ

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನಕ್ಕೆ ಚೀನಾ ಎರಡನೇ ಬಾರಿ ನೆರವು ನೀಡಿದೆ. 2016 ರಲ್ಲಿ 900 ಮಿಲಿಯನ್ ಡಾಲರ್ ಹಣಕಾಸಿನ ನೆರವು ನೀಡಿದ್ದ ಚೀನಾ ಈ 2017 ರಲ್ಲಿ 300 ಮಿಲಿಯನ್ ಡಾಲರ್ ನೆರವು ನೀಡಿದೆ.

China-Pakistan
Srinivas Rao BV
Updated On : 27 Apr 2017, 10:55 am
ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನಕ್ಕೆ ಚೀನಾ ಎರಡನೇ ಬಾರಿ ನೆರವು ನೀಡಿದೆ. 2016 ರಲ್ಲಿ 900 ಮಿಲಿಯನ್ ಡಾಲರ್ ಹಣಕಾಸಿನ ನೆರವು ನೀಡಿದ್ದ ಚೀನಾ ಈ 2017 ರಲ್ಲಿ 300 ಮಿಲಿಯನ್ ಡಾಲರ್ ನೆರವು ನೀಡಿದೆ. 
ಚೀನಾದ ಆರ್ಥಿಕ ನೆರವು ಪಾಕಿಸ್ತಾನದಲ್ಲಿ ವಿದೇಶಿ ಮೀಸಲು ಸಂಗ್ರಹ ಕುಸಿತ ಕಂಡಿರುವುದನ್ನು ಹಾಗೂ ಆಮದು ಏರಿಕೆಯಾಗುತ್ತಿರುವ ನಡುವೆ ರಫ್ತು ಇಳಿಕೆಯಾಗುತ್ತಿರುವುದಕ್ಕೆ ಸ್ಪಷ್ಟ ಚಿತ್ರಣವಾಗಿದೆ ಎಂದು ಮಾಧ್ಯಮಗಳು ವಿಶ್ಲೇಷಿಸುತ್ತಿವೆ.
ಈ ನಡುವೆಯೇ ಪಾಕಿಸ್ತಾನ ಹಾಗೂ ಅಮೆರಿಕಾದ ದ್ವಿಪಕ್ಷೀಯ ಬಾಂಧವ್ಯ ಕುಸಿಯುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಚೀನಾ- ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧವೂ ಬೆಳೆಯುತ್ತಿರುವುದರ ಸಂಕೇತವಾಗಿದೆ. ಸಿಪಿಇಸಿ ಯೋಜನೆಯಡಿ ಚೀನಾ ವಿವಿಧ ಕ್ಷೇತ್ರಗಳಲ್ಲಿನ ಯೋಜನೆಗಳಿಗೆ ಅನುಮತಿ ನೀಡಿದ್ದು, ಪಾಕಿಸ್ತಾನದಲ್ಲಿನ ಚೀನಾ ಹೂಡಿಕೆ 55 ಬಿಲಿಯನ್ ಡಾಲರ್ ನಿಂದ 62 ಬಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ. 

Advertisement

Advertisement

ಚೀನಾ ಪಾಕಿಸ್ತಾನಕ್ಕೆ ನೀಡಿರುವ ಸಾಲ ಹಾಗೂ ಹೂಡಿಕೆ ರೂಪದಲ್ಲಿ ನೀಡಿರುವ ನೆರವಿಗೆ 3 ದಶಕಗಳಲ್ಲಿ 90 ಬಿಲಿಯನ್ ಡಾಲರ್ ನಷ್ಟು ಪಾವತಿ ಮಾಡಬೇಕಾಗುತ್ತದೆ. 2020-25 ರ ವೇಳೆಗೆ ಸಿಪಿಇಸಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಚೀನಾಗೆ ಸರಾಸರಿ 3 ಬಿಲಿಯನ್ ನಷ್ಟು ಹಣ ಮರುಪಾವತಿ ಮಾಡಬೇಕಾಗುತ್ತದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement