ವಿದೇಶ

ಪಾಕಿಸ್ತಾನದಲ್ಲಿದ್ದ ಹಿಂದೂ ದೇವಾಲಯ ಧ್ವಂಸ

Shilpa D
ಕರಾಚಿ: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿದ್ದ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಧರ್ಮನಿಂದನೆ ಹಾಗೂ ಭಯೋತ್ಪಾದನೆ ಕೇಸುಗಳನ್ನು ದಾಖಲಿಸಲಾಗಿದೆ.
ನಿನ್ನೆ ರಾತ್ರಿ ತಟ್ಟಾ ಜಿಲ್ಲೆಯ ಘಾರೋ ಪಟ್ಟಣದಲ್ಲಿದ್ದ ದೇವಾಲಯವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ದೇವಾಲಯದಲ್ಲಿದ್ದ ದೇವರ ವಿಗ್ರಹಗಳು ಪಕ್ಕದಲ್ಲಿದ್ದ ಒಳಚರಂಡಿಯಲ್ಲಿ ಸಿಕ್ಕಿವೆ ಎಂದು 'ಡಾನ್ ' ಪತ್ರಿಕೆ ವರದಿ ಮಾಡಿದೆ. 
ಧರ್ಮನಿಂದನೆ ಹಾಗೂ ಭಯೋತ್ಪಾದನೆ ಹೆಸರಲ್ಲಿ ಕೇಸು ದಾಖಲಿಸಲಾಗಿದೆ. ದೇವರ ವಿಗ್ರಹಗಳನ್ನು ನಾಶ ಗೊಳಿಸಿದ ಆರೋಪದ ಮೇಲೆ ಪೊಲೀಸರು ಎಫ್ ಐಆಆರ್ ದಾಖಲಿಸಿದ್ದಾರೆ. 
ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು ಇದುವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ. ಎಲ್ಲಾ ದೃಷ್ಟಿ ಕೋನಗಳಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ದೇವಾಲಯದ ಬಳಿ 12 ವರ್ಷದ ಬಾಲಕನ ಹೆಜ್ಜೆಯ ಗುರುತು ಲಭ್ಯವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಬೆಳಗ್ಗಿನ ಜಾವ 1 ರಿಂದ 5 ಗಂಟೆಯೊಳಗೆ ದೇವಾಲಯಕ್ಕೆ ಆಗಮಿಸಿರುವ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.ಬೆಳಗ್ಗಿನ ಪೂಜೆಗಾಗಿ ಭಕ್ತರು ದೇವಾಲಯಕ್ಕೆ ಆಗಮಿಸಿದಾಗ ಅಲ್ಲಿ ದೇವರ ವಿಗ್ರಹಗಳು ಇರಲಿಲ್ಲ, ದೇವಾಲಯದ ಇತಿಹಾಸದಲ್ಲೇ ಇಂಥಹ ಘಟನೆ ನಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT