ಕ್ಯೂಬಾ: ಸೇನಾಪಡೆ ವಿಮಾನ ಪತನ; 8 ಮಂದಿ ಸಾವು!
ಕ್ಯೂಬಾದ ಮಿಲಿಟರಿ ಪಡೆಯ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ 8 ಮಂದಿ ಸಿಬ್ಬಂದಿಗಳು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಹವಾನ: ಕ್ಯೂಬಾದ ಮಿಲಿಟರಿ ಪಡೆಯ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ 8 ಮಂದಿ ಸಿಬ್ಬಂದಿಗಳು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಜಧಾನಿ ಹವಾನದ ಆರ್ಟೆಮಿಸಾ ಪ್ರಾಂತ್ಯದಲ್ಲಿ ಶನಿವಾರ ವಿಮಾನ ಪರ್ವತಕ್ಕೆ ಅಪ್ಪಳಿಸಿದ್ದು, ಪರಿಣಾಮ ಪೈಲಟ್ ಸೇರಿದಂತೆ ಅದರಲ್ಲಿದ್ದ ಮಿಲಿಟರಿ ಪಡೆಯ ಎಂಟು ಜನ ಸಿಬ್ಬಂದಿ ಮೃತಪಟ್ಟಿದ್ದಾರೆ.
ಎಎನ್-26 ರಷ್ಯಾದ ನಿರ್ಮಿತ ವಿಮಾನ ಇದಾಗಿದ್ದು ಬೆಳಿಗ್ಗೆ 6.38 ಕ್ಕೆ ಹವಾನಾ ಹೊರವಲಯದಲ್ಲಿರುವ ಪ್ಲೆಯಾ ಬರಾಕೊವಾ ವಿಮಾನ ನಿಲ್ದಾಣದಿಂದ ಕ್ಯಾಂಡೆಲಾರಿಯಾ ಎಂಬ ಪಟ್ಟಣಕ್ಕೆ ಹೊರಟಿತ್ತು. ಈ ವೇಳೆ ಅಲ್ಲಿನ ಲೊಮಾ ಡಿ ಲಾ ಪಿಮೆಂಟಾ ಎಂಬ ಪರ್ವತಕ್ಕೆ ವಿಮಾನ ಅಪ್ಪಳಿಸಿದ್ದರಿಂದ ಈ ದುರಂತ ಸಂಭವಿಸಿದೆ. ಕ್ಯೂಬಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳಿಗೆ ಸೇರಿದ ವಿಮಾನ ಇದಾಗಿದ್ದು, ಅಪಘಾತ ಸಂಬಂಧ ಕ್ಯೂಬಾ ಸೇನೆ ತನಿಖೆಗೆ ಆದೇಶಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.