ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಭಯೋತ್ಪಾದನೆಗೆ ಬೆಂಬಲವನ್ನು ಟ್ರಂಪ್ ಸಹಿಸುವುದಿಲ್ಲ: ಪಾಕ್ ಗೆ ಅಮೆರಿಕ ಎಚ್ಚರಿಕೆ

ಭಯೋತ್ಪಾದನೆಗೆ ಬೆಂಬಲವನ್ನು ಟ್ರಂಪ್ ಸಹಿಸುವುದಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜನರಲ್ ಹೆಚ್ ಆರ್ ಮ್ಯಾಕ್ ಮಾಸ್ಟರ್ ಹೇಳಿದ್ದು...

ಡೊನಾಲ್ಡ್ ಟ್ರಂಪ್
Srinivas Rao BV
Updated On : 6 Aug 2017, 4:57 am
ವಾಷಿಂಗ್ ಟನ್: ಭಯೋತ್ಪಾದನೆಗೆ ಬೆಂಬಲವನ್ನು ಟ್ರಂಪ್ ಸಹಿಸುವುದಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜನರಲ್ ಹೆಚ್ ಆರ್ ಮ್ಯಾಕ್ ಮಾಸ್ಟರ್ ಹೇಳಿದ್ದು, ಪಾಕಿಸ್ತಾನಕ್ಕೆ ಭಯೋತ್ಪಾದನೆಯನ್ನು ಬೆಂಬಲಿಸುವ ತನ್ನ ನಿಲುವನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ಅಮೆರಿಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. 
ಪಾಕಿಸ್ತಾನದ ವಿರುದ್ಧ ಈಗಾಗಲೇ ಅಮೆರಿಕ ಹಲವು ಬಾರಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪ ಮಾಡಿದೆ. ಈಗ ಮತ್ತೊಂದು ಬಾರಿ ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ ನೀಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಸಹಿಸುವುದಿಲ್ಲ ಎಂದು ಅಮೆರಿಕ ಎನ್ಎಸ್ಎ ಮ್ಯಾಕ್ ಮಾಸ್ಟರ್ ಹೇಳಿದ್ದಾರೆ. 
ಪಾಕಿಸ್ತಾನ ಕೇವಲ ಕೆಲವು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಮಾತ್ರ ಕ್ರಮ ಕೈಗೊಂಡಿದೆ. ಆದರೆ ಗಡಿಯಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದು, ಭಾರತ-ಅಫ್ಘಾನಿಸ್ತಾನಗಳು ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆ ಆರೋಪ ಮಾಡುತ್ತಿವೆ, ಅಮೆರಿಕ ಇದನ್ನು ಸಹಿಸುವುದಿಲ್ಲ ಎಂಬುದು ಸ್ಪಷ್ಟ ಎಂದು ಮ್ಯಾಕ್ ಮಾಸ್ಟರ್ ಪಾಕ್ ಗೆ ಎಚ್ಚರಿಸಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement