ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಪಾಕಿಸ್ತಾನದಲ್ಲಿರುವ ಚೀನಾ ಪ್ರಜೆಗಳ ಮೇಲೆ ಉಗ್ರ ದಾಳಿ ಎಚ್ಚರಿಕೆ

ಪಾಕಿಸ್ತಾದಲ್ಲಿರುವ ತನ್ನ ಪ್ರಜೆಗಳ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಸ್ಲಾಮಾಬಾದ್ ನಲ್ಲಿರುವ ಚೀನಾ ರಾಯಭಾರಿ...

ಸಾಂದರ್ಭಿಕ ಚಿತ್ರ
Lingaraj Badiger
Updated On : 8 Dec 2017, 9:01 am
ಬೀಜಿಂಗ್‌: ಪಾಕಿಸ್ತಾದಲ್ಲಿರುವ ತನ್ನ ಪ್ರಜೆಗಳ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಸ್ಲಾಮಾಬಾದ್ ನಲ್ಲಿರುವ ಚೀನಾ ರಾಯಭಾರಿ ಕಚೇರಿ ತನ್ನ ವೆಬ್ ಸೈಟ್ ಮೂಲಕ ಶುಕ್ರವಾರ ಮುನ್ನೆಚ್ಚರಿಕೆ ನೀಡಿದೆ.
ಪಾಕಿಸ್ತಾನದಲ್ಲಿರುವ ಚೀನಾ ಸಂಸ್ಥೆಗಳು ಮತ್ತು ಸಿಬ್ಬಂದಿಗಳ ಗುರಿಯಾಗಿಸಿಕೊಂಡು ಉಗ್ರರು ಸರಣಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿದ್ದು, ಜನಸಂದಣಿಯ ಪ್ರದೇಶಗಳಿಂದ ದೂರವಿರುವಂತೆ ಚೀನಾ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.
ಚೀನಾದ ಸಾಗರೋತ್ತರ ಪ್ರಭಾವ ಹೆಚ್ಚುತ್ತಿರುವಂತೆಯೇ ಚೀನೀಯರ ಮೇಲೆ ಭಯೋತ್ಪಾದಕರ ದಾಳಿಯೂ ಹೆಚ್ಚುತ್ತಿದೆ. ಕಳೆದ ಜೂನ್‌ನಲ್ಲಿ ಕ್ವೆಟ್ಟಾದಿಂದ ಇಬ್ಬರು ಚೀನೀ ಶಿಕ್ಷಕರನ್ನು ಐಸಿಸ್‌ ಉಗ್ರರು ಅಪಹರಿಸಿ ಕೊಂದು ಹಾಕಿದ್ದರು.

Advertisement

Advertisement

ಪಾಕಿಸ್ತಾನದಲ್ಲಿ ಚೀನಾ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಸಾವಿರಾರು ಚೀನೀಯರು ಪಾಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಬೆಲ್ಟ್‌ ಅಂಡ್‌ ರೋಡ್‌ ಯೋಜನೆಯಡಿ 6000 ಕೋಟಿ ಡಾಲರ್‌ ಮೌಲ್ಯದ ಮೂಲಸೌಕರ್ಯ ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಂದರು ಮತ್ತು ರಸ್ತೆ ನಿರ್ಮಾಣ ಯೋಜನೆಗಳ ಮೇಲೆ ಸತತ ಉಗ್ರರ ದಾಳಿಯೂ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement