ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ನದಿ ಮಾಲಿನ್ಯ ವಿಷಯಗಳ ಬಗ್ಗೆ ಭಾರತದೊಂದಿಗೆ ಮಾತುಕತೆ ಮುಂದುವರೆಸುತ್ತೇವೆ: ಚೀನಾ

ಯಾರ್ಲುಂಗ್ ತ್ಸಾಂಗ್ಪೊ ನದಿಯ ಬಳಿ ನಡೆಯುತ್ತಿರುವ ಯೋಜನೆಗಳಿಂದ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶಕ್ಕೆ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಭಾರತದೊಂದಿಗೆ ಮಾತುಕತೆಯನ್ನು ಮುಂದುವರೆಸುತ್ತೇವೆ

ನದಿ
Srinivas Rao BV
Updated On : 26 Dec 2017, 6:46 am
ಬೀಜಿಂಗ್: ಯಾರ್ಲುಂಗ್ ತ್ಸಾಂಗ್ಪೊ ನದಿಯ ಬಳಿ ನಡೆಯುತ್ತಿರುವ ಯೋಜನೆಗಳಿಂದ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶಕ್ಕೆ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಭಾರತದೊಂದಿಗೆ ಮಾತುಕತೆಯನ್ನು ಮುಂದುವರೆಸುತ್ತೇವೆ ಎಂದು ಚೀನಾ ಹೇಳಿದೆ. 
ಟಿಬೇಟ್ ನಲ್ಲಿ ನದಿ ಪಾತ್ರದಲ್ಲಿ ನಡೆಯುತ್ತಿರುವ ಯೋಜನೆಗಳಿಂದ ಭೂಕಂಪ ಸಂಭವಿಸುತ್ತಿದ್ದು, ಇದರ ಪರಿಣಾಮವಾಗಿ ಬ್ರಹ್ಮಪುತ್ರ ನದಿ (ಚೀನಾದಲ್ಲಿ ಉಗಮಿಸುವ ಯಾರ್ಲುಂಗ್ ತ್ಸಾಂಗ್ಪೊ) ಸಹ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ವರದಿಗಳ ಪ್ರಕಾರ ಬೃಹತ್ ಪ್ರಮಾಣದಲ್ಲಿ ಅವಶೇಷಗಳು ನದಿಯ ಮೂರು ಸ್ಥಳಗಳಲ್ಲಿ ಸುಮಾರು 12 ಕಿಮೀ ವ್ಯಾಪ್ತಿಯಲ್ಲಿ ಅಣೆಕಟ್ಟು ಮಾದರಿಯಲ್ಲಿ ಸಂಗ್ರಹಣೆಯಾಗಿದೆ.  
ಭೂಕುಸಿತ ಹಾಗೂ ನದಿಯ ಬಳಿ ಅಣೆಕಟ್ಟು ಮಾದರಿಯಲ್ಲಿ ಅವಶೇಷಗಳು ಸಂಗ್ರಹಣೆಯಾಗಿರುವುದರ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚೀನಾ ನದಿ ವಿಷಯಗಳ ಬಗ್ಗೆ ಭಾರತದೊಂದಿಗೆ ಮಾತುಕತೆ ಮುಂದುವರೆಸುತ್ತೇವೆ ಎಂದು ಹೇಳಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement