ವಿದೇಶ

ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದ ಕೇರಳದ ಯುವಕ ಆಫ್ಘನ್​ನಲ್ಲಿ ಸಾವು

Vishwanath S
ನವದೆಹಲಿ: ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ್ದ ಕೇರಳ ಮೂಲದ ಶಂಕಿತ ಇಸಿಸ್ ಉಗ್ರ ಹಫೀಜ್ ಅಫ್ಘಾನಿಸ್ತಾನದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದಾನೆ. 
ಈ ಬಗ್ಗೆ ಆಫ್ಘನ್ ಅಧಿಕಾರಿಗಳು ಹಫೀಜ್ ಕುಟುಂಬಕ್ಕೆ ಟೆಲಿಗ್ರಾಂ ಮೂಲಕ ಮಾಹಿತಿ ರವಾನಿಸಿದ್ದಾರೆ. 21 ವರ್ಷದ ಹಫೀಜ್ ಕಳೆದ ವರ್ಷ ಇಸಿಸ್ ಉಗ್ರ ಸಂಘಟನೆ ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿರುವ 11 ಯುವಕರಲ್ಲಿ ಈತನೂ ಒಬ್ಬ ಎನ್ನಲಾಗಿದೆ. 
ಹಫೀಜ್ ಸಾವಿನ ಕುರಿತು ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕಾಬೂಲ್ ನಲ್ಲಿರುವ ಭಾರತೀಯ ಹೈಕಮಿಷನ್ ಸ್ಥಳೀಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದೆ. 
SCROLL FOR NEXT