ವಾಷಿಂಗ್ ಟನ್: 'ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮರಳಿ ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ’ ಹೀಗೆಂದು ಒಬಾಮ ಅವರ ಸ್ನೇಹಿತ ಹಾಗೂ ಮಾಜಿ ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ಹೇಳಿದ್ದಾರೆ.
ನ್ಯಾಷನಲ್ ಡೆಮಾಕ್ರೆಟಿಕ್ ರೀಡಿಸ್ಟ್ರಿಕ್ಟಿಂಗ್ ಸಮಿತಿ(ಎನ್ ಡಿಆರ್ ಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಎರಿಕ್ ಹೋಲ್ಡರ್ ಅವರಿಗೆ ಕಳೆದ ವರ್ಷ ಬರಾಕ್ ಒಬಾಮ ಆಹ್ವಾನ ನೀಡಿದ್ದರು. ಈಗ ಹೊಸ ಎನ್ ಡಿಆರ್ ಸಿ ಗೆ ಸಹಕಾರಿಯಾಗುವ ನಿಟ್ಟಿನಲ್ಲಿ ರಾಜ್ಯ ಶಾಸಕರೊಂದಿಗೆ ಚರ್ಚೆ ನಡೆಸುವುದು ಹಾಗೂ ದೇಣಿಗೆ ಸಂಗ್ರಹ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಎರಿಕ್ ಹೋಲ್ಡರ್ ತಿಳಿಸಿದ್ದಾರೆ.
ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪುನಃ ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂದು ಎರಿಕ್ ಹೋಲ್ಡರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.