ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಸಿರಿಯಾದ ಅಜಾಜ್‌ ನಲ್ಲಿ ಕಾರ್‌ ಬಾಂಬ್‌ ದಾಳಿ: ಸಾವಿನ ಸಂಖ್ಯೆ 43ಕ್ಕೆ ಏರಿಕೆ

ಟರ್ಕಿ ಗಡಿಗೆ ಹೊಂದಿಕೊಂಡಿರುವ ಹಾಗೂ ಬಂಡುಕೋರರ ವಶದಲ್ಲಿರುವ ಸಿರಿಯಾದ ಅಜಾಜ್‌ ಪಟ್ಟದಲ್ಲಿ ಶನಿವಾರ...

ಸಾಂದರ್ಭಿಕ ಚಿತ್ರ
Lingaraj Badiger
Updated On : 7 Jan 2017, 8:11 am
ಬೇರೂತ್‌: ಟರ್ಕಿ ಗಡಿಗೆ ಹೊಂದಿಕೊಂಡಿರುವ ಹಾಗೂ ಬಂಡುಕೋರರ ವಶದಲ್ಲಿರುವ ಸಿರಿಯಾದ ಅಜಾಜ್‌ ಪಟ್ಟದಲ್ಲಿ ಶನಿವಾರ ಸಂಭವಿಸಿದ ಕಾರ್‌ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 43 ಮಂದಿ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸ್ಥಳೀಯ ಇಸ್ಲಾಮಿಕ್‌ ಕೋರ್ಟ್‌ ಹೌಸ್‌ ಮುಂಬಾಗದಲ್ಲಿರುವ ಒಂದು ಮಾರ್ಕೆಟ್‌ ಪ್ರದೇಶದ ಈ ಬಾಂಬ್ ದಾಳಿ ನಡೆದಿದೆ ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ಸಿರಿಯಾ ಮೂಲದ ಮಾನವ ಹಕ್ಕುಗಳ ವೀಕ್ಷಣಾಲಯದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಆರು ಬಂಡುಕೋರರು ಸೇರಿದಂತೆ 43 ಮಂದಿ ಮೃತಪಟ್ಟಿದ್ದು, ಹೆಚ್ಚಿನವರು ನಾಗರಿಕರಿದ್ದಾರೆ ಎಂದು ಅವರು ಹೇಳಿದ್ದಾರೆ.

Advertisement

Advertisement

ಇದುವರೆಗೂ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಈ ದಾಳಿಯ ಹಿಂದೆ ಐಸಿಸ್‌ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement