ನ್ಯೂಯಾರ್ಕ್: ಅಮೆರಿಕಾದ ನೂತನ ಅಧ್ಯಕ್ಷನಾಗಿ ಡೊನಾಲ್ಡ್ ಟ್ರಂಪ್ ಅವರು ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದ ದಿನ ನಡೆದ ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ 6 ಮಂದಿ ಪತ್ರಕರ್ತರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಎಲ್ಲರಿಗೂ 10 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಟ್ರಂಪ್ ಅವರನ್ನು ವಿರೋಧಿ ಪ್ರತಿಭಟನಾಕಾರರ ಜತೆ ಬಂಧಿಯಾದ ಪತ್ರಕರ್ತರ ಪೈಕಿ ಆರ್ ಟಿ ಅಮೆರಿಕದ ಅಲೆಕ್ಸಾಂಡರ್ ರುಬಿನ್ ಸ್ಟೈನ್ ಕೂಡ ಒಬ್ಬರಾಗಿದ್ದರು. ಅವರ ವಿರುದ್ಧ ಗಲಭೆಗೆ ಪ್ರಚೋನೆ ನೀಡಿರುವ ಆರೋಪವನ್ನು ಹೊರೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದು ಕೊಲಂಬಿಯಾ ಜಿಲ್ಲಾ ಕಾನೂನು ಸುವ್ಯವಸ್ಥೆಗೆ ಅಡ್ಡಿ ಕಾನೂನಿ ಅಡಿಯಲ್ಲಿ ಬರುವ ಪ್ರಮುಖ ಅಪರಾಧಗಳಲ್ಲಿ ಒಂದಾಗಿದೆ. ಪ್ರಸ್ತುತ ಎಲ್ಲಾ 6 ಪತ್ರಕರ್ತರನ್ನೂ ಬಿಡುಗಡೆ ಮಾಡಲಾಗಿದೆ. ಆದರೂ ಎಲ್ಲರೂ ವಿಚಾರಣೆ ಎದುರಿಸಸಬೇಕಾಗಿದೆ. ಅಲ್ಲದೆ. ಆರೋಪಗಳು ಸಾಬೀತಾಗಿದ್ದೇ ಆದರೆ, ಪತ್ರಕರ್ತರು 10 ವರ್ಷ ಜೈಲು ವಾಸದೊಂದಿಗೆ 25 ಸಾವಿರ ಡಾಲರ್ ಗಳನ್ನು ದಂಡವಾಗಿ ನೀಡಬೇಕಿದೆ ಎಂದು ತಿಳಿದುಬಂದಿದೆ.