ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಸಂಪ್ರದಾಯವಾದಿ ನೀಲ್ ಗೋರ್ಸಚ್ ಆಯ್ಕೆ ಮಾಡಿದ ಟ್ರಂಪ್

ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸ್ಥಾನಕ್ಕೆ ಸಂಪ್ರದಾಯವಾದಿ ನೀಲ್ ಗೋರ್ಸಚ್ ಅವರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನ್ಯಾಯಮೂರ್ತಿ ಅಂಟೋನಿನ್ ಸ್ಕಾಲಿಯ

ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಘೋಷಣೆ ಮಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, (ಹಿನ್ನಲೆಯಲ್ಲಿ) ಪತ್ನಿಯೊಂದಿಗೆ ನಿಂತ ನೀಲ್ ಗೋರ್ಸಚ್
Guruprasad Narayana
Updated On : 1 Feb 2017, 12:07 pm
ವಾಷಿಂಗ್ಟನ್: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸ್ಥಾನಕ್ಕೆ ಸಂಪ್ರದಾಯವಾದಿ ನೀಲ್ ಗೋರ್ಸಚ್ ಅವರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನ್ಯಾಯಮೂರ್ತಿ ಅಂಟೋನಿನ್ ಸ್ಕಾಲಿಯ ಮೃತವಾದಾಗಲಿಂದಲೂ, ಸರ್ವೋಚ್ಛ ನ್ಯಾಯಾಲಯ ಡೆಮಾಕ್ರಟ್ ಮತ್ತು ರಿಪಬ್ಲಿಕನ್ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯ ನಡುವೆ ಒಡೆದುಹೋಗಿತ್ತು. 
ಕೊಲೊರಾಡೊ ನಗರದ ಅಮೇರಿಕ ಕೋರ್ಟ್ ಆಫ್ ಅಪೀಲ್ಸ್ ನ ನ್ಯಾಯಾಧೀಶ ಗೋರ್ಸಚ್ ಅವರಿಗೆ ೪೯ ವರ್ಷವಾಗಿದ್ದು, ೨೫ ವರ್ಷಗಳಲ್ಲಿ ಈ ಉನ್ನತ ಸ್ಥಾನಕ್ಕೆ ಆಯ್ಕೆಯಾಗಿರುವುವರಲ್ಲಿ ಅತಿ ಕಿರಿಯರು. 
ಟ್ರಂಪ್ ಅವರ ಮಂಗಳವಾರ ರಾತ್ರಿಯ ಆಯ್ಕೆ ಅವರ ಸಂಪ್ರದಾಯ ನಿಷ್ಠೆಯನ್ನು ಮೆರೆದಿದ್ದು, ಸುಪ್ರೀಂ ಕೋರ್ಟ್ ಬಲಪಂಥೀಯತೆಯ ಕಡೆಗೆ ಹೊರಳುವಂತೆ ಮಾಡಿದ್ದಾರೆ. ಆದರೆ ನ್ಯಾಯಾಧೀಶ ಆಂಥನಿ ಕೆನಡಿ ಅವರ ಲಿಬರಲ್ ಮತಗಳಿಂದ ಇದಕ್ಕೆ ಸ್ವಲ್ಪ ತೆಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

Advertisement

Advertisement

ಆದರೆ ಸೆನೆಟ್ ನಲ್ಲಿ ಈ ಆಯ್ಕೆಯನ್ನು ಪ್ರಶ್ನಿಸಿ ತಡೆಯುವ ಸಾಧ್ಯತೆ ಕೂಡ ಇದೆ. ಈ ತಿಂಗಳ ಮೊದಲ ಭಾಗದಲ್ಲಿ ಮೆರ್ರಿಕ್ ಗಾರ್ಲ್ಯಾಂಡ್ ಅವರನ್ನು ಹೊರತುಪಡಿಸಿ ಬೇರೆ ಯಾರನ್ನು ಆಯ್ಕೆ ಮಾಡಿದರು ಅದಕ್ಕೆ ತಡೆ ಹಾಕುವುದಾಗಿ ಡೆಮಾಕ್ರಟ್ ಪಕ್ಷದ ಸೆನೆಟ್ ಹೇಳಿತ್ತು. ಬರಾಕ್ ಒಬಾಮಾ ಆಯ್ಕೆಯ ಈ ಅಭ್ಯರ್ಥಿಗೆ ಕಳೆದ ವರ್ಷ ರಿಪಬ್ಲಿಕನ್ ಪಕ್ಷದ ಸೆನೆಟ್ ತಡೆ ಹಾಕಿತ್ತು. 
ಮಾಜಿ ಅಮೇರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಗೋರ್ಸಚ್ ಅವರನ್ನು ೨೦೦೬ ರಲ್ಲಿ ನ್ಯಾಯಾಧೀಶ ಸ್ಥಾನಕ್ಕೆ ನೇಮಿಸಿದ್ದರು. ಈಗ ಇವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಿರುವುದಕ್ಕೆ ಡೆಮಾಕ್ರಟ್ ಸೆನೆಟರ್ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಹೊರಗೆ ಪ್ರತಿಭಟನೆಗಳು ಕೂಡ ನಡೆದಿವೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement