ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಲಡಾಕ್ ನಲ್ಲಿ ಟಿಬೇಟ್ ಧ್ವಜಾರೋಹಣ: ಚೀನಾದಿಂದ ತೀವ್ರ ಪ್ರತಿಭಟನೆ

ಟಿಬೇಟ್ ನ ಗಡಿಪಾರಾಗಿರುವ ಸರ್ಕಾರ ಭಾರತದಲ್ಲಿ ಟಿಬೇಟ್ ರಾಷ್ಟ್ರದ ಧ್ವಜಾರೋಹಣ ಮಾಡಿರುವುದು ಚೀನಾ ಕೆಂಗಣ್ಣಿಗೆ ಗುರಿಯಾಗಿದ್ದು, ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.

ಟಿಬೇಟ್ ಧ್ವಜ
Srinivas Rao BV
Updated On : 10 Jul 2017, 10:52 am
ಬೀಜಿಂಗ್: ಟಿಬೇಟ್ ನ ಗಡಿಪಾರಾಗಿರುವ ಸರ್ಕಾರ ಭಾರತದಲ್ಲಿ ಟಿಬೇಟ್ ರಾಷ್ಟ್ರದ ಧ್ವಜಾರೋಹಣ ಮಾಡಿರುವುದು ಚೀನಾ ಕೆಂಗಣ್ಣಿಗೆ ಗುರಿಯಾಗಿದ್ದು, ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. 
ಭಾರತ-ಚೀನಾ ಪ್ರದೇಶದ ಎಲ್‌ಒಸಿ ಅಂದರೆ ವಾಸ್ತವ ಗಡಿ ರೇಖೆಯಲ್ಲಿ ಟಿಬೇಟ್ ನ ಗಡಿಪಾರಾಗಿರುವ ಸರ್ಕಾರ ಟಿಬೇಟ್ ನ ರಾಷ್ಟ್ರಧ್ವಜವನ್ನು ಹಾರಿಸಿದ್ದು, ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಭಾರತ-ಚೀನಾ ನಡುವೆ ಗಡಿ ಸಮಸ್ಯೆ ಎದುರಾಗಿರುವಾಗಲೇ ಟಿಬೆಟ್ ನ ಸರ್ಕಾರದ ನಡೆ ವಿರುದ್ಧ ಚೀನಾ ಮಾಧ್ಯಮ ಕಿಡಿ ಕಾರಿದ್ದು, ಟಿಬೇಟ್ ನ ಪ್ರತ್ಯೇಕತಾವಾದಿಗಳಿಗೆ ಧ್ವಜಾರೋಹಣ ಮಾಡಲು ಭಾರತದ ಅಧಿಕಾರಿಗಳೇ ಪ್ರಚೋದನೆ ನೀಡಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ನಲ್ಲಿ ಪ್ರಕಟವಾಗಿರುವ ಲೇಖನದ ಲೇಖಕ ಯು-ನಿಂಗ್ ಆರೋಪಿಸಿದ್ದಾರೆ.
ಭಾರತ ಸರ್ಕಾರ ಚೀನಾದೊಂದಿಗಿನ ರಾಜತಾಂತ್ರಿಕತೆಯಲ್ಲಿ ಟಿಬೇಟ್ ಕಾರ್ಡ್ ನ್ನು ಹಿಂದಿನಿಂದಲೂ ಪ್ರಯೋಗಿಸಿಕೊಂಡು ಬಂದಿದೆ.  ಚೀನಾ ಮೇಲೆ ಒತ್ತಡ ಹೇರುವ ಭಾಗವಾಗಿ ಭಾರತದ ಅಧಿಕಾರಿಗಳು ಟಿಬೇಟ್ ನ ಪ್ರತ್ಯೇಕತಾವಾದಿಗಳಿಗೆ ಧ್ವಜಾರೋಹಣ ಮಾಡಲು ಪ್ರಚೋದನೆ ನೀಡಿರುವ ಸಾಧ್ಯತೆ ಇದೆ. ಆದರೆ ಭಾರತ ಸರ್ಕಾರ ಇದನ್ನು ಬೆಂಬಲಿಸುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement