ಸಂಗ್ರಹ ಚಿತ್ರ 
ವಿದೇಶ

78 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ

ಪಾಕಿಸ್ತಾನ ಸಾಗರಪ್ರದೇಶದೊಳಗೆ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ 78 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಭಾನುವಾರ ಬಿಡುಗಡೆ ಮಾಡಿದೆ...

ಕರಾಚಿ: ಪಾಕಿಸ್ತಾನ ಸಾಗರಪ್ರದೇಶದೊಳಗೆ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ 78 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಭಾನುವಾರ ಬಿಡುಗಡೆ ಮಾಡಿದೆ. 
ಕರಾಚಿಯ ಲಂಧಿ ಜೈಲಿನಿಂದ 78 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಂಧ್ ಪ್ರಾಂತ್ಯದ ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 
ಪ್ರಸ್ತುತ ಪಾಕಿಸ್ತಾನದ ಜೈಲಿನಲ್ಲಿ ಇನ್ನೂ 298 ಭಾರತೀಯ ಮೀನುಗಾರರಿದ್ದು, ಎಲ್ಲರೂ ಭಾರತೀಯರೇ ಎಂಬುದನ್ನು ಭಾರತ ಸಾಕ್ಷಿ ಸಮೇತ ಸಾಬೀತು ಮಾಡಿದ ಬಳಿಕ ಪಾಕಿಸ್ತಾನ ಭಾರತೀಯರನ್ನು ಬಿಡುಗಡೆ ಮಾಡಲಿದೆ. ಪ್ರಸ್ತುತ ಬಿಡುಗಡೆಗೊಂಡಿರುವ ಭಾರತೀಯ ಮೀನುಗಾರರು ಇಂದು ಭಾರತದ ಗಡಿ ತಲುಪಲಿದ್ದಾರೆಂದು ವರದಿಗಳು ತಿಳಿಸಿವೆ 
ಅರಬ್ಬೀ ಸಮುದ್ರದಲ್ಲಿ ಉಭಯ ರಾಷ್ಟ್ರಗಳ ನಡುವೆ ಗಡಿ ಇನ್ನೂ ಸರಿಯಾಗಿ ನಿರ್ಧಾರವಾಗಿಲ್ಲ. ಇದರ ಜೊತೆಗೆ ತಂತ್ರಜ್ಞಾನ ಕೊರತೆ ಕೂಡ ಇದ್ದು, ಮೀನುಗಾರಿಕೆ ಹೋಗುವ ಮೀನುಗಾರಿರಗೆ ತಾವು ಎಲ್ಲಿದ್ದೇವೆಂಬುದು ತಿಳಿಯಯುವುದಿಲ್ಲ. ಹೀಗಾಗಿ ಪಾಕಿಸ್ತಾನ ಸಾಗರ ಪ್ರದೇಶ ಪ್ರವೇಶಿಸಿ ಬಂಧನಕ್ಕೊಳಲಾಗುತ್ತಿದ್ದಾರೆ. 
ಇನ್ನೂ ಕೆಲವು ಪ್ರಕರಣಗಳಲ್ಲಿ ಮೀನುಗಾರರ ಶಿಕ್ಷೆ ಅವಧಿ ಪೂರ್ಣಗೊಂಡಿದ್ದರೂ, ಉಭಯ ದೇಶಗಳ ನಡುವಿನ ಕಳಪೆ ರಾಜತಾಂತ್ರಿಕ ಸಂಬಂಧದಿಂದಾಗಿ ಪಾಕಿಸ್ತಾನದ ಜೈಲುಗಳಲ್ಲೇ ಇನ್ನೂ ಸೆರೆವಾಸ ಅನುಭವಿಸುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್