ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಸ್ನೇಹಕ್ಕೆ ವಿರುದ್ಧ, ಅಪಾಯಕಾರಿ ಸೇನಾ ಚಟುವಟಿಕೆ ನಿಲ್ಲಿಸುವಂತೆ ಅಮೆರಿಕಾಗೆ ಚೀನಾ ಆಗ್ರಹ

ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಅಮೆರಿಕದ ಕಣ್ಗಾವಲು ವಿಮಾನ ಎದುರಾದಾಗ ತನ್ನ ಫೈಟರ್ ಜೆಟ್ ಪೈಲಟ್ ಗಳು ಅಪಾಯಕಾರಿಯಾಗಿ ವಿಮಾನವನ್ನು ಚಾಲನೆ ಮಾಡಿದ್ದಾರೆ ಎಂಬ ಆರೋಪವನ್ನು ಚೀನಾ

ಚೀನಾ
Srinivas Rao BV
Updated On : 25 Jul 2017, 7:22 am
ಬೀಜಿಂಗ್: ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಅಮೆರಿಕದ ಕಣ್ಗಾವಲು ವಿಮಾನ ಎದುರಾದಾಗ ತನ್ನ ಫೈಟರ್ ಜೆಟ್ ಪೈಲಟ್ ಗಳು ಅಪಾಯಕಾರಿಯಾಗಿ ವಿಮಾನವನ್ನು ಚಾಲನೆ ಮಾಡಿದ್ದಾರೆ ಎಂಬ ಆರೋಪವನ್ನು ಚೀನಾ ನಿರಾಕರಿಸಿದೆ. 
ಈ ಘಟನೆ ಬಗ್ಗೆ ಚೀನಾದ ವಕ್ತಾರ ರೆನ್ ಗುವೊಕ್ಯಾಂಗ್ ಪ್ರತಿಕ್ರಿಯೆ ನೀಡಿದ್ದು, ಜೆ-10 ಫೈಟರ್ಸ್ ನ ಪೈಲಟ್ ಗಳ ಕ್ರಮ ಕಾನೂನಾತ್ಮಕ ಹಾಗೂ ವೃತ್ತಿಪರವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಅಮೆರಿಕ ವಿರುದ್ಧ ಆರೋಪ ಮಾಡಿರುವ ಚೀನಾ ವಕ್ತಾರರು ಅಮೆರಿಕದ ಕಣ್ಗಾವಲು ವಿಮಾನ ಪದೇ ಪದೇ ಹಾರಾಟ ನಡೆಸುವುದು ಅಪಘಾತಕ್ಕೆ ಕಾರಣವಾಗಲಿದೆ, ಇದರಿಂದ ಚೀನಾದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುತ್ತಿದ್ದು, ಚೀನಾ-ಅಮೆರಿಕ ನಡುವಿನ ಸ್ನೇಹಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ. 
ಅಮೆರಿಕ, ಚೀನಾದೊಂದಿಗಿನ ಸ್ನೇಹಕ್ಕೆ ವಿರುದ್ಧವಾದ ಇಂತಹ ಅಪಾಯಕಾರಿ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ರೆನ್ ಗುವೋಕ್ಯಾಂಗ್ ಆಗ್ರಹಿಸಿದ್ದಾರೆ. ಇದೇ ವೇಳೆ ಹೊರ ದೇಶಗಳೊಂದಿಗೆ ಪರಸ್ಪರ ವಿಶ್ವಾಸದೊಂದಿಗೆ ತನ್ನ ಸೇನೆಯನ್ನು ಬೆಳೆಸುವುದಕ್ಕೆ ಚೀನಾ ಬದ್ಧವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement