ಇಸಿಸ್ ಉಗ್ರರನ್ನು ಹತ್ಯೆಗೈದ ದೃಶ್ಯ 
ವಿದೇಶ

18 ಇಸಿಸ್ ಉಗ್ರರನ್ನು ಗನ್ ಪಾಯಿಂಟ್‌ನಲ್ಲಿ ಗುಂಡಿಟ್ಟು ಹತ್ಯೆಗೈದ ಲಿಬಿಯಾ ಸೇನೆ

ವಿದ್ವಂಸಕ ಕೃತ್ಯಗಳ ಮೂಲಕ ಜಗತ್ತನ್ನೇ ನಡುಗಿಸಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ 18 ಮಂದಿ ಉಗ್ರರನ್ನು ಲಿಬಿಯಾ ಸೇನೆಯ ಯೋಧರು ಗನ್ ಪಾಯಿಂಟ್‌ನಲ್ಲಿ...

ವಿದ್ವಂಸಕ ಕೃತ್ಯಗಳ ಮೂಲಕ ಜಗತ್ತನ್ನೇ ನಡುಗಿಸಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ 18 ಮಂದಿ ಉಗ್ರರನ್ನು ಲಿಬಿಯಾ ಸೇನೆಯ ಯೋಧರು ಗನ್ ಪಾಯಿಂಟ್‌ನಲ್ಲಿ ಗುಂಡಿಟ್ಟು ಹತ್ಯೆಗೈದಿದ್ದಾರೆ ಎನ್ನಲಾದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಈ ಹಿಂದೆ ಇಸಿಸ್ ಉಗ್ರರು ಬಂಧಿತ ಸಾರ್ವಜನಿಕರು ಅಥವಾ ಯೋಧರನ್ನು ಇದೇ ರೀತಿ ಕೆಂಪು ಬಟ್ಟೆ ತೊಡಿಸಿ, ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿ, ಅವರನ್ನು ಮಂಡಿ ಮೇಲೆ ಕುಳಿಸಿ ಹಿಂದಿನಿಂದ ತಲೆಗೆ ಗುಂಡಿಟ್ಟು ಹತ್ಯೆ ಮಾಡುತ್ತಿದ್ದರು. ಅದರಂತೆ ಲಿಬಿಯಾ ಸೇನೆ ಸಹ ಬಂಧಿತ 18 ಮಂದಿ ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಅದೇ ರೀತಿಯ ಶಿಕ್ಷೆಯನ್ನು ನೀಡಿದ್ದಾರೆ. 
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಇತ್ತೀಚೆಗಷ್ಟೇ ಇರಾಕ್ ನ ಮೊಸುಲ್ ನಗರ ಕಳೆದ ಮೂರು ವರ್ಷಗಳಿಂದ ಇಸಿಸ್ ಉಗ್ರರ ಕಪಿಮುಷ್ಠಿಯಲ್ಲಿತ್ತು. ಉಗ್ರರ ವಿರುದ್ಧ ಕಾದಾಡಿ ಇರಾಕ್ ಸೇನೆ ಐತಿಹಾಸಿಕ ಗೆಲುವು ದಾಖಲಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!