ನರೇಂದ್ರ ಮೋದಿ - ಎಮ್ಯಾನುವೆಲ್ ಮೆಕ್ರಾನ್
ಪ್ಯಾರಿಸ್: ನಾಲ್ಕು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿ ಶನಿವಾರ ಫ್ರಾನ್ಸ್ ಗೆ ಭೇಟಿ ನೀಡಿದ್ದಾರೆ.
ಇಂದು ಫ್ರಾನ್ಸ್ ನೂತನ ಅಧ್ಯಕ್ಷ ಎಮ್ಯಾನುವೆಲ್ ಮೆಕ್ರಾನ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಭಯೋತ್ಪದಾನೆ ವಿರುದ್ಧ ಹೋರಾಟದ ತಂತ್ರಗಳ ಬಗ್ಗೆ ಮತ್ತು ಪ್ಯಾರಿಸ್ ಹವಮಾನ ಬದಲಾವಣೆ ಒಪ್ಪಂದದ ಕುರಿತು ಚರ್ಚಿಸಿದ್ದಾರೆ.
ಬಳಿಕ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ಇಂದು ವಿಶ್ವಕ್ಕೆ ಅತಿ ದೊಡ್ಡ ಸವಾಲಾಗಿದೆ. ಹೀಗಾಗಿ ಭಯೋತ್ಪಾದನೆ ನಿಗ್ರಹ ಹಾಗೂ ಹವಾಮಾನ ವೈಪರೀತ್ಯ ವಿಚಾರಗಳಲ್ಲಿ ಭಾರತ ಮತ್ತು ಫ್ರಾನ್ಸ್ ಜೊತೆಗೂಡಿ ಹೋರಾಡುವ ಅಗತ್ಯವಿದೆ ಎಂದರು.
ಈ ವೇಳೆ ಮಾತನಾಡಿದ ಮೆಕ್ರಾನ್ ಅವರು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಫ್ರಾನ್ಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಅಲ್ಲದೆ ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ 2015ರಲ್ಲಿ ಮಾಡಲಾದ ಮಹತ್ವದ ಪ್ಯಾರಿಸ್ ಒಪ್ಪಂದವನ್ನು ಜಾರಿಗೊಳಿಸುವುದಕ್ಕೆ ಫ್ರಾನ್ಸ್ ಬದ್ಧವಾಗಿದೆ ಎಂದರು.
ಫ್ರಾನ್ಸ್ ನ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಭಾರತೀಯ ಯೋಧರು ತಮ್ಮ ಪ್ರಾಣ ಅರ್ಪಿಸಿದ್ದಾರೆ. ಭಾರತದೊಂದಿಗೆ ಫ್ರಾನ್ಸ್ ಹೊಂದಿರುವ ಗಟ್ಟಿ ಸಂಬಂಧಕ್ಕೆ ಇದೇ ಸಾಕ್ಷಿ ಎಂದು ಮೆಕ್ರಾನ್ ಸ್ಮರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics