ಲಂಡನ್ ನಲ್ಲಿ ಉಗ್ರ ದಾಳಿ 
ವಿದೇಶ

ಲಂಡನ್ ನಲ್ಲಿ ಮತ್ತೆ ಉಗ್ರ ದಾಳಿ; 6 ನಾಗರಿಕರ ಸಾವು, ಮೂವರು ಉಗ್ರರ ಕೊಂದ ಪೊಲೀಸರು!

ಲಂಡನ್ ನಲ್ಲಿ ಮತ್ತೆ ಉಗ್ರ ದಾಳಿಯಾಗಿದ್ದು, ಎರಡು ಪ್ರತಿಷ್ಟಿತ ಪ್ರದೇಶಗಳಲ್ಲಿ ಏಕಕಾಲದಲ್ಲಿ ಉಗ್ರರು ದಾಳಿ ಮಾಡಿದ ಪರಿಣಾಮ ಸುಮಾರು 6 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದಬಂದಿದೆ.

ಲಂಡನ್: ಲಂಡನ್ ನಲ್ಲಿ ಮತ್ತೆ ಉಗ್ರ ದಾಳಿಯಾಗಿದ್ದು, ಎರಡು ಪ್ರತಿಷ್ಟಿತ ಪ್ರದೇಶಗಳಲ್ಲಿ ಏಕಕಾಲದಲ್ಲಿ ಉಗ್ರರು ದಾಳಿ ಮಾಡಿದ ಪರಿಣಾಮ ಸುಮಾರು 6 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದಬಂದಿದೆ.

ಪ್ರತಿಷ್ಟಿತ ಲಂಡನ್ ಬ್ರಿಡ್ಜ್  ಬಳಿ ಉಗ್ರನೋರ್ವ ನಡೆಸಿದ ವ್ಯಾನ್ ದಾಳಿಯಲ್ಲಿ ಕನಿಷ್ಚ ಓರ್ವ ನಾಗರಿಕ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ವಾರಾಂತ್ಯವಾದ್ದರಿಂದ ಲಂಡನ್ ಬ್ರಿಡ್ಜ್ ಬಳಿ ಸಾಕಷ್ಚು ಜನ ಸೇರಿದ್ದರು.  ಇದನ್ನೇ ತನ್ನ ಕುಕೃತ್ಯಕ್ಕೆ ಬಳಕೆ ಮಾಡಿಕೊಂಡ ಉಗ್ರಗಾಮಿಯೋರ್ವ ವ್ಯಾನ್ ಅನ್ನು ವೇಗವಾಗಿ ಪಾದಾಚಾರಿಗಳ ಮೇಲೆ ಹರಿಸಿದ್ದಾನೆ. ಪರಿಣಾಮ ಸ್ಥಳದಲ್ಲೇ ಓರರ್ವ ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನು ಮತ್ತೊಂದು ಪ್ರತಿಷ್ಠಿತ ಪ್ರದೇಶವಾದ ಬಾರೋ ಮಾರ್ಕೆಟ್ ಬಳಿಯಲ್ಲಿಯೂ ಉಗ್ರ ದಾಳಿಯಾಗಿದ್ದು, ಬಾರೋ ಮಾರ್ಕೆಟ್ ಬಳಿಯ ಬಾರ್ ಬಳಿ ಉಗ್ರಗಾಮಿಗಳು ಹರಿತವಾದ ಚಾಕುವಿನಿಂದ ಸಿಕ್ಕಸಿಕ್ಕವರಿಗೆ ಇರಿದಿದ್ದಾರೆ.  ಪರಿಣಾಮ ಅಲ್ಲಿಯೂ ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಲಂಡನ್ ಪೊಲೀಸ್ ಮೂಲಗಳು ತಿಳಿಸಿರುವಂತೆ ಒಟ್ಟಾರೆ ಉಗ್ರದಾಳಿಯಲ್ಲಿ ಕನಿಷ್ಛ 6 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೂರಕ್ಕೂ ಹೆಚ್ಚು ಉಗ್ರರಿಂದ ದಾಳಿ
ಇನ್ನು ಬಾರೋ ಮಾರ್ಕೆಟ್ ನಲ್ಲಿ ಚಾಕು ದಾಳಿ ಮಾಡಿರುವ ಉಗ್ರರ ಸಮೂಹದಲ್ಲಿ ಕನಿಷ್ಠ 3ಕ್ಕೂ ಹೆಚ್ಚು ಉಗ್ರರು ಇರಬಹುದು ಎಂದು ಶಂಕಿಸಿದ್ದಾರೆ. ಚಾಕು ಇರಿತ ಪ್ರಕರಣ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಮೂರು  ಮಂದಿ ಉಗ್ರರನ್ನು ಗುಂಡಿಟ್ಟುಕೊಂದು ಹಾಕಿದ್ದು, ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇನ್ನು ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಲಂಡನ್ 6 ಪ್ರಮುಖ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ  ಕೊಡಿಸಲಾಗುತ್ತಿದೆ. ಇನ್ನು ಘಟನಾ ಸ್ಥಳದಲ್ಲಿ ಶಸಸ್ತ್ರ ಪೊಲೀಸರು ಸುತ್ತುವರೆದಿದ್ದು. ಭಾರಿ ಪ್ರಮಾಣದ ಗುಂಡಿನ ಚಕಮಕಿಯ ಸದ್ದು ಕೇಳಿಬರುತ್ತಿದೆ. ಅಂತೆಯೇ ಎರಡು ಬಾರಿ ಬಾಂಬ್ ಸ್ಫೋಟದ ಶಬ್ದ ಕೂಡ ಕೇಳಿಬಂದಿದೆ  ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ಜೊತೆ ಒಪ್ಪಂದಕ್ಕೆ ಇರಾನ್‌ ಕಾತರ, ಶೀಘ್ರದಲ್ಲೇ ಯುದ್ಧ ಅಂತ್ಯ: ತೈಲ ಬೆಲೆ ಭಾರೀ ಕುಸಿತ; ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇಟಲಿಯಲ್ಲಿ ಪ್ರಧಾನಿ ಮೋದಿ: “ವೆಲ್‌ಕಮ್ ಟು ರೋಮ್ ಮೈ ಫ್ರೆಂಡ್” ಎಂದು ಆತ್ಮೀಯ ಸ್ವಾಗತ ಕೋರಿದ ಜಾರ್ಜಿಯಾ ಮೆಲೋನಿ..!

Operation Epic Fury: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಾಗೆ ಮಹಾಘಾತಕ: F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ..!

ಪ್ರಧಾನಿ ಮೋದಿಯನ್ನು 'ಹಾವಾಡಿಗ'ನಂತೆ ಬಿಂಬಿಸಿ ವಿಕೃತಿ: ಭಾರತವನ್ನು ಹೀಯಾಳಿಸಿದ ನಾರ್ವೆ ಪತ್ರಿಕೆ; ನೆಟ್ಟಿಗರು ತೀವ್ರ ಕಿಡಿ

Bangladesh ಸರ್ಕಾರಿ ಕಚೇರಿಯಲ್ಲಿ ಭಾರತೀಯ ಅಧಿಕಾರಿ ನಿಗೂಢ ಸಾವು, ತನಿಖೆ ಆರಂಭ

SCROLL FOR NEXT