ಪಾಕಿಸ್ತಾನ ಮಿತ್ರ ರಾಷ್ಟ್ರ ಎನ್ನುವುದಕ್ಕಿಂತ ಅಪಾಯಕಾರಿ ರಾಷ್ಟ್ರ ಎನ್ನುವುದೇ ಸರಿ: ಯುಎಸ್ ಥಿಂಕ್ ಟ್ಯಾಂಕ್
ಪಾಕಿಸ್ತಾನ ಇನ್ನೂ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದು, ಮಿತ್ರರಾಷ್ಟ್ರವಾಗಿರುವುದಕ್ಕಿಂತ ಅಪಾಯಕಾರಿ ರಾಷ್ಟ್ರವಾಗಿದೆ ಎಂದು ಅಮೆರಿಕಾದ ಥಿಂಕ್ ಟ್ಯಾಂಕ್ ಅಭಿಪ್ರಾಯಪಟ್ಟಿದೆ.
ವಾಷಿಂಗ್ ಟನ್: ಪಾಕಿಸ್ತಾನ ಇನ್ನೂ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದು, ಮಿತ್ರರಾಷ್ಟ್ರವಾಗಿರುವುದಕ್ಕಿಂತ ಅಪಾಯಕಾರಿ ರಾಷ್ಟ್ರವಾಗಿದೆ ಎಂದು ಅಮೆರಿಕಾದ ಥಿಂಕ್ ಟ್ಯಾಂಕ್ ಅಭಿಪ್ರಾಯಪಟ್ಟಿದೆ.
ಭಯೋತ್ಪಾದನೆಗೆ ಬೆಂಬಲಿಸಿದ್ದೇ ಆದಲ್ಲಿ ನಿರ್ಬಂಧ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ಡೊನಾಲ್ಡ್ ಟ್ರಂಪ್ ಆಡಳಿತ ರವಾನಿಸಬೇಕು ಎಂದು ಥಿಂಕ್ ಟ್ಯಾಂಕ್ ಹೇಳಿದೆ. ಅಫ್ಘಾನಿಸ್ತಾನಕ್ಕೆ ಭಯೋತ್ಪಾದನೆಯ ವಿರುದ್ಧದ ಹೋರಾಟ, ಆಡಳಿತ, ಬಡತನ ನಿರ್ಮೂಲನೆ ಮಾಡುವುದರಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಮತ್ತೊಂದು ಬದಿಯಲ್ಲಿ ಪಾಕಿಸ್ತಾನ ತಾಲೀಬಾನ್ ಹಾಗೂ ಹಕ್ಕಾನಿ ಜಾಲದ ಅಭಯಾರಣ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮಿತ್ರ ರಾಷ್ಟ್ರವಾಗಿರುವುದಕ್ಕಿಂತ ಅಪಾಯಕಾರಿ ರಾಷ್ಟ್ರವಾಗಿದೆ ಎಂದು ಅಮೆರಿಕಾ ಥಿಂಕ್ ಟ್ಯಾಂಕ್ ಹೇಳಿದೆ.
ಸೆಂಟರ್ ಫಾರ್ ಸ್ಟ್ರಾಟಜಿಕ್ ಆಂಡ್ ಇಂಟರ್ ನ್ಯಾಷನಲ್ ಸ್ಟಡೀಸ್ (ಸಿಎಸ್ಐಎಸ್೦) ಥಿಂಕ್ ಟ್ಯಾಂಕ್ ಈ ವರದಿಯನ್ನು ಸಿದ್ಧಪಡಿಸಿದ್ದು, ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ಮುಂದುವರೆಸಿದರೆ ನಿರ್ಬಂಧ ವಿಧಿಸಬೇಕೆಂಬ ಎಚ್ಚರಿಕೆಯನ್ನು ವಿಧಿಸಬೇಕೆಂದು ವರದಿ ಹೇಳಿದೆ.