ವಿದೇಶ

ನಾನು ದಂಗಲ್‌ ಚಿತ್ರ ನೋಡಿದ್ದೇನೆ, ಚೆನ್ನಾಗಿದೆ: ಮೋದಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌

Lingaraj Badiger
ಅಸ್ತಾನಾ: ನಾನು ಆಮೀರ್‌ ಖಾನ್‌ ಅಭಿನಯದ ಕ್ರೀಡಾ ಕಥೆಯ ಬಾಲಿವುಡ್ ಚಿತ್ರ "ದಂಗಲ್‌' ನೋಡಿದ್ದೇನೆ ಮತ್ತು ಇಷ್ಟವಾಯಿತು ಎಂದು ಚೀನಾದ ಅಧ್ಯಕ್ಷ  ಕ್ಸಿ ಜಿನ್‌ ಪಿಂಗ್‌ ಅವರು ಕಝಕಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಭ್ರಮದಿಂದ ಹೇಳಿದ್ದಾರೆ. 
ದಂಗಲ್‌ ಕ್ರೀಡಾ ಚಿತ್ರವನ್ನು ನಾನು ನೋಡಿದ್ದೇನೆ. ತುಂಬಾ ಚೆನ್ನಾಗಿದೆ. ಚೀನಾದಲ್ಲಿ ಅದು ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ಎಸ್‌ ಜೈಶಂಕರ್‌ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ದಂಗಲ್ ಚಿತ್ರ ಕಳೆದ ಮೇ 5ರಂದು ಚೀನಾದಲ್ಲಿ ಬಿಡುಗಡೆಗೊಂಡಿದ್ದು, ಅಲ್ಲಿಯೂ ಅದು ಸೂಪರ್‌ ಹಿಟ್‌ ಆಗಿದೆ. ಇತ್ತೀಚಿಗೆ 1,100 ಕೋಟಿ ರು.ಗಳ ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆಯನ್ನು ದಾಖಲಿಸಿರುವ ದಂಗಲ್‌ ಚಿತ್ರ, ಚೀನಾ ಸಿನಿಮಾ ರಂಗದಲ್ಲೂ ಹಲವು ದಾಖಲೆಗಳನ್ನು ಮುರಿದು ಅತ್ಯಂತ ಜನಪ್ರಿಯವಾಗಿದೆ. 
ಚೀನಾದಲ್ಲಿ ಒಂದು ಶತಕೋಟಿ ಯುವಾನ್‌ (14.70 ಕೋಟಿ ಡಾಲರ್‌) ಗಳಿಸಿರುವ 33ನೇ ಚಿತ್ರ ಎಂಬ ದಾಖಲೆಯನ್ನು ದಂಗಲ್‌ ಮಾಡಿದೆ. ಚೀನಾದ ಸುಮಾರು 7,000 ಸಿನಿಮಾ ಮಂದಿಗಳಲ್ಲಿ ದಂಗಲ್‌ ಪ್ರದರ್ಶನ ಕಾಣುತ್ತಿದೆ.
ಕಝಕಿಸ್ಥಾನದ ರಾಜಧಾನಿ ಅಸ್ತಾನಾದಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಸಹಕಾರ ಶೃಂಗದ ಪಾರ್ಶ್ವದಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭೇಟಿಯಾಗಿದ್ದಾರೆ. 
SCROLL FOR NEXT