ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ನಾವು ಭಯೋತ್ಪಾದಕರಿಗೆ ಆಶ್ರಯ ನೀಡಿಲ್ಲ: ಅಮೆರಿಕಾದಲ್ಲಿ ನಗೆಪಾಟಲಿಗೀಡಾದ ಪಾಕ್ ಹೇಳಿಕೆ

ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದರ ಬಗ್ಗೆ ಪಾಕಿಸ್ತಾನದ ಪ್ರತಿನಿಧಿ ನೀಡಿದ ಹೇಳಿಕೆ ನಗೆಪಾಟಲಿಗೀಡಾಗಿದೆ.

ಅಜೀಜ್ ಅಹ್ಮದ್ ಚೌಧರಿ
Srinivas Rao BV
Updated On : 9 Jun 2017, 5:40 am
ವಾಷಿಂಗ್ ಟನ್: ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದರ ಬಗ್ಗೆ ಪಾಕಿಸ್ತಾನದ ಪ್ರತಿನಿಧಿ ನೀಡಿದ ಹೇಳಿಕೆ ನಗೆಪಾಟಲಿಗೀಡಾಗಿದೆ. 
ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿಲ್ಲ. ಪಾಕ್ ನೆಲ ಭಯೋತ್ಪಾದಕರಿಗೆ ಸ್ವರ್ಗವಾಗಿಲ್ಲ ಎಂದು ಅಮೆರಿಕಾದ ಥಿಂಕ್ ಟ್ಯಾಂಕ್ ಎದುರು ಪಾಕಿಸ್ತಾನದ ಪ್ರತಿನಿಧ್/ ರಾಯಭಾರಿ ಅಜೀಜ್ ಅಹ್ಮದ್ ಚೌಧರಿ ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ಅಮೆರಿಕಾದ ಸದಸ್ಯರಿಗೆ ನಗು ಬಂದಿದ್ದು, ಪಾಕ್ ರಾಯಭಾರಿಯ ಹೇಳಿಕೆ ನಗೆಪಾಟಲಿಗೀಡಾಗಿದೆ. 
ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿಲ್ಲ ಎಂಬ ತಮ್ಮ ಹೇಳಿಕೆ ನಗೆಪಾಟಲಿಗೀಡಾದ ಬಗ್ಗೆ ಮುಜುಗರ ಎದುರಿಸಿದ ಅಜೀಜ್ ಅಹ್ಮದ್ ಚೌಧರಿ, ಇದರಲ್ಲಿ ನಗುವಂಥದ್ದೇನಿದೆ ಎಂದು ವಾಷಿಂಗ್ ಟನ್ ಥಿಂಕ್ ಟ್ಯಾಂಕ್ ನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಪಾಕ್ ಭಯೋತ್ಪಾದನೆಗೆ ಬೆಂಬಲಿಸುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ನಮ್ಮ ಬಳಿ ಪುರಾವೆಗಳಿವೆ ಎಂದು ಚೌಧರಿ ವಾದ ಮಂಡಿಸಿದ್ದಾರೆ. 

Advertisement

Advertisement

ಅಫ್ಘಾನಿಸ್ತಾನದ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿರುವ ಚೌಧರಿ ಪಾಕಿಸ್ತಾನದ ಆಸ್ಪತ್ರೆಯಲ್ಲಿ ನಿಧನನಾಗಿದ್ದಾನೆ ಎಂದು ಹೇಳಲಾಗುತ್ತಿರುವ ಭಯೋತ್ಪಾದಕ ಸಂಘಟನೆ ತಾಲೀಬಾನ್ ನಾಯಕ ಅಫ್ಘಾನಿಸ್ತಾನದಿಂದ ಹೊರ ಬಂದಿರಲೇ ಇಲ್ಲ ಎಂದು ವಾದಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement