ವಿದೇಶ

ಲಿಬಿಯಾ ಸಮುದ್ರ ತೀರದಲ್ಲಿ ಮುಳುಗಿ ೮ ಜನ ನಿರಾಶ್ರಿತರ ಸಾವು

Guruprasad Narayana
ಟ್ರಿಪೋಲಿ: ಯೂರೋಪಿಗೆ ವಲಸೆ ಹೋಗುತ್ತಿದ್ದ ಗುಂಪಿನಲ್ಲಿ ೮ ಜನ ನಿರಾಶ್ರಿತರು ಶನಿವಾರ ಲಿಬಿಯಾ ಸಮುದ್ರತೀರದಲ್ಲಿ ಮುಳುಗಿ ಸಾವನ್ನಪ್ಪಿದ್ದು, ೧೨ ಜನ ಕಾಣೆಯಾಗಿದ್ದಾರೆ ಎಂದು ಲಿಬಿಯಾದ ಸಮುದ್ರತೀರದ ಗಾರ್ಡ್ ಗಳು ಹೇಳಿದ್ದಾರೆ. 
"ರಬ್ಬರ್ ಹಡಗಿನಲ್ಲಿ ತೆರಳುತ್ತಿದ್ದ ೧೨೦ ಅಥವಾ ೧೩೦ ಜನರಲ್ಲಿ ೮ ಮೃತ ದೇಹಗಳು ಪತ್ತೆಯಾಗಿವೆ" ಎಂದು ಕೋಸ್ಟಲ್ ಗಾರ್ಡ್ ಕಮ್ಯಾಂಡರ್ ಫಾತಿ ಅಲ್-ರಯನಿ ಹೇಳಿದ್ದಾರೆ. 
ನಂತರ ಈ ಹಡಗು ಗರಬುಲ್ಲಿಯ ೮ ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ ಎಂದು ಹೇಳಿರುವ ಅಲ್-ರಯನಿ, ಮೃತಪಟ್ಟವರ ಸಂಖ್ಯೆ ೧೦೦ ದಾಟಬಹುದು ಎಂದಿದ್ದಾರೆ. 
ಈ ವಲಸಿಗರಲ್ಲಿ ಹೆಚ್ಚಿನ ಜನ ಆಫ್ರಿಕಾ, ಬಾಂಗ್ಲಾದೇಶ ಮತ್ತು ಮೊರೊಕ್ಕೋ ದೇಶದ ನಾಗರಿಕರು ಎಂದು ತಿಳಿಯಲಾಗಿದೆ. ಮೆಡಿಟರೇನಿಯನ್ ಸಮುದ್ರದಿಂದ ಯುರೋಪಿಗೆ ತೆರಳುವ ನಿರಾಶ್ರಿತರಿಗೆ ಲಿಬಿಯಾ ಆದ್ಯತೆಯ ಸ್ಥಳ. ಇಂತಹ ಗೊಂದಲಗಳ ಲಾಭ ಪಡೆಯುವ ಕಳ್ಳಕೋರರು ಹಡಗುಗಳನ್ನು ದೋಚಲು ಕೂಡ ಮುಂದಾಗುತ್ತಾರೆ ಎನ್ನಲಾಗಿದ್ದು ಆಗ ಕೂಡ ಅವಘಡಗಳು ನಡೆಯುತ್ತವೆ ಎನ್ನಲಾಗಿದೆ.
SCROLL FOR NEXT