ವಿಮಾನದ ಮೂಲಕ ಡ್ರಗ್ ಸ್ಮಗ್ಲಿಂಗ್ ಆರೋಪದ ಮೇಲೆ 14 ಪಿಐಎ ಸಿಬ್ಬಂದಿ ಬಂಧನ
ವಿಮಾನದ ಮೂಲಕ ಡ್ರಗ್ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಪಾಕಿಸ್ತಾನ ಅಂತರಾಷ್ಟ್ರೀಯ ಏರ್ ಲೈನ್ಸ್(ಪಿಐಎ)ನ 14....
ಇಸ್ಲಾಮಾಬಾದ್: ವಿಮಾನದ ಮೂಲಕ ಡ್ರಗ್ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಪಾಕಿಸ್ತಾನ ಅಂತರಾಷ್ಟ್ರೀಯ ಏರ್ ಲೈನ್ಸ್(ಪಿಐಎ)ನ 14 ಸಿಬ್ಬಂದಿಯನ್ನು ಶನಿವಾರ ಎನ್ಎಫ್(ಆಂಟಿ-ನಾರ್ಕೋಟಿಕ್ಸ್ ಫೋರ್ಸ್) ಬಂಧಿಸಿದೆ.
ಇಂದು ಕರಾಚಿ ವಿಮಾನ ನಿಲ್ದಾಣದಲ್ಲಿ ಪಿಐಎನ 9 ಸಿಬ್ಬಂದಿ ಹಾಗೂ ರಾವಲ್ಪಿಂಡಿ ಮತ್ತು ಲಾಹೋರ್ ವಿಮಾನ ನಿಲ್ದಾಣದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಡಾವ್ ವರದಿ ಮಾಡಿದೆ.
ಡ್ರಗ್ಸ್ ಸ್ಮಗ್ಲಿಂಗ್ ಆರೋಪದ ಮೇಲೆ ಕರಾಚಿಯ ಪಿಐಎ ನೌಕರರ ಪೀಪಲ್ಸ್ ಯೂನಿಟಿಯ ಉಪಾಧ್ಯಕ್ಷ ಸಯೀದ್ ಗುಲಾಮ್ ಯಜ್ದನಿ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿದೆ ಎಂದು ಎಎನ್ಎಫ್ ಮಹಾ ನಿರ್ದೇಶಕ ಮೇಜರ್ ಜನರಲ್ ಮುಸರತ್ ನವಾಜ್ ಮಲಿಕ್ ಅವರು ಹೇಳಿರುವುದಾಗಿ ಡಾನ್ ವರದಿ ತಿಳಿಸಿದೆ.
ಪಾಕಿಸ್ತಾನ ವಾಯುಪಡೆಯ ಇಬ್ಬರು ಮಾಜಿ ಅಧಿಕಾರಿಗಳು ಸಹ ಡ್ರಗ್ ಸ್ಮಗ್ಲಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಮಲಿಕ್ ಅವರು ಹೇಳಿದ್ದಾರೆ. ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವುದಾಗಿ ವರದಿ ವಿವರಿಸಿದೆ.