ವಿದೇಶ

ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರದಿಂದ ಹೆಮ್ಮೆ: ಡೊನಾಲ್ಡ್ ಟ್ರಂಪ್ ಸಮರ್ಥನೆ

Sumana Upadhyaya
ನವದೆಹಲಿ: ಪ್ಯಾರಿಸ್ ಹವಾಮಾನ ಒಪ್ಪಂದದಲ್ಲಿ ದೇಶದ ಕೊಡುಗೆಯನ್ನು ಮತ್ತು ದೃಢವಾದ ಬೆಂಬಲವನ್ನು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಾಪಿಸಿದ್ದರೆ, ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಒಪ್ಪಂದದಿಂದ ಹಿಂದೆ ಸರಿದಿದ್ದಾರೆ.
ಹವಾಮಾನ ಬದಲಾವಣೆ ಒಪ್ಪಂದ ಈಗಿನ ಅಧ್ಯಕ್ಷರಿಗೆ ಪ್ರಕೋಪವೆನಿಸಿದೆ.ಹವಾಮಾನ ಬದಲಾವಣೆ ಚೀನಾದ ವಂಚನೆ ಕ್ರಮ ಎಂದು ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದರು. ಜಾಗತಿಕ ತಾಪಮಾನ ಪರಿಕಲ್ಪನೆ ಸೃಷ್ಟಿ ಮಾಡಿದ್ದು. ಅಮೆರಿಕಾದ ಉತ್ಪಾದನೆಯನ್ನು ಸ್ಪರ್ಧಾರಹಿತವನ್ನಾಗಿ ಮಾಡಲು ಚೀನಾದ ಸೃಷ್ಟಿಯಿದು ಎಂದು ಹೇಳಿದ್ದಾರೆ.
ಇದಕ್ಕೆ ಸಾಕಷ್ಟು ಟೀಕೆಗಳು ಬಂದ ನಂತರ ತಮ್ಮ ನಿರ್ಧಾರವನ್ನು ಬದವಾಗಿ ಸಮರ್ಥಿಸಿರುವ ಟ್ರಂಪ್, ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದಿಂದ ಹೊರಬಂದಿರುವುದು ಹೆಮ್ಮೆಯ ನಡೆ ಎಂದು ಹೇಳಿದ್ದಾರೆ.
ಅಮೆರಿಕನ್ನರ ಉದ್ಯೋಗ, ಕಂಪೆನಿಗಳು ಮತ್ತು ನೌಕರರನ್ನು ರಕ್ಷಿಸಲು ಏಕಮುಖವಾಗಿರುವ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದಕ್ಕೆ ಬಂದಿದ್ದೇವೆ ಎಂದು ಟ್ರಂಪ್ ನಿನ್ನೆ ಅಮೆರಿಕಾ ಇಂಧನ ವಲಯದ ಭವಿಷ್ಯ ಕುರಿತ ಭಾಷಣದಲ್ಲಿ ಹೇಳಿದರು.
ನಮ್ಮ ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿಯನ್ನು ಕಾಪಾಡಲು ಒಪ್ಪಂದದಿಂದ ಹಿಂದೆ ಸರಿಯುವುದು ಮುಖ್ಯವಾಗಿತ್ತು. ಇದಕ್ಕೆ ದೇಶದ ಜನತೆ ನನಗೆ ಅಭಿನಂದನೆ ಸಲ್ಲಿಸುತ್ತಾರೆ ಎಂಬ ನಂಬಿಕೆಯಿದೆ. ಮುಂದೊಂದು ದಿನ ಮತ್ತೆ ಒಪ್ಪಂದದ ಜೊತೆ ಸೇರಲೂಬಹುದು. ಆದರೆ ಅದು ಉತ್ತಮ ಪರಿಸ್ಥಿತಿ ಮೂಲಕ ಮಾತ್ರ ಎಂದು ಅವರು ಹೇಳಿದರು.
ಜರ್ಮನಿಯ ಹಂಬರ್ಗ್ ನಲ್ಲಿ ಟ್ರಂಪ್ ಅವರು 20 ನಾಯಕರ ಗುಂಪನ್ನು ಭೇಟಿ ಮಾಡಲಿದ್ದಾರೆ.
ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಪ್ರಯತ್ನವಾಗಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದರಿಂದ ಹಿಂದೆ ಸರಿಯುವುದಾಗಿ ಡೊನಾಲ್ಡ್ ಟ್ರಂಪ್ ಕಳೆದ ಜೂನ್ 1ರಂದು ಪ್ರಕಟಿಸಿದ್ದರು.
ಚೀನಾದ ನಂತರ ವಿಶ್ವದಲ್ಲಿ ಅತಿ ಹೆಚ್ಚು ಹಸಿರುಮನೆ ಅನಿಲಗಳ ಹೊರಸೂಸುವ ದೇಶ ಅಮೆರಿಕಾ ಆಗಿದೆ.
SCROLL FOR NEXT