ನವದೆಹಲಿ: ಭಯೋತ್ಪಾದನೆಗೆ ಪ್ರಚೋದನೆ ನೀಡುವ ದೇಶ ಎಂದು ಪಾಕಿಸ್ತಾನವನ್ನು ಅಮೆರಿಕಾ ಕಾಂಗ್ರೆಸ್ ಘೋಷಿಸಬೇಕೆಂದು ಅಮೆರಿಕಾದ ಶಾಸಕ ಟೆಡ್ ಪೊ ಮತ್ತೆ ಒತ್ತಾಯಿಸಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನವು ಪರಿಸ್ಥಿತಿಯನ್ನು ಎದುರಿಸಬೇಕೆಂದು ಅವರು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಮಿಲಿಟರಿ ಸೇವೆಗಳ ಸಹಾಯ ನೀಡುವುದಕ್ಕೆ ಕಡಿತ ಹೇರಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವನ್ನು ಟೆಡ್ ಪೊ ಕಳೆದ ವಾರವಷ್ಟೇ ಒತ್ತಾಯಿಸಿದ್ದರು. ಪಾಕಿಸ್ತಾನದ ನ್ಯೊಟೊ ಒಪ್ಪಂದಕ್ಕೆ ಸಹಿ ಮಾಡದಿರುವ ಸ್ಥಿತಿಗತಿಯನ್ನು ರದ್ದು ಮಾಡುವಂತೆ ಕೂಡ ಅವರು ಅಮೆರಿಕಾವನ್ನು ಒತ್ತಾಯಿಸಿದ್ದಾರೆ.
ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯ ನೀಡುವುದನ್ನು ನಿಲ್ಲಿಸಿ. ಹಣ ನೀಡುವುದನ್ನು ಕೂಡ ನಿಲ್ಲಿಸಿ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದೇಶ ಎಂದು ಹೆಸರು ನೀಡಿ. ಪಾಕಿಸ್ತಾನದ ಸ್ಥಾನಮಾನವನ್ನು ಅಮೆರಿಕಾದ ಪ್ರಮುಖ ನ್ಯಾಟೊ ಅಲ್ಲದ ಮಿತ್ರ ರಾಷ್ಟ್ರವಾಗಿರುವುದನ್ನು ತೆಗೆದುಹಾಕಿ ಎಂದು ಟೆಡ್ ಪೊ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ದೀರ್ಘ ಇತಿಹಾಸಕ್ಕೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪಾಕಿಸ್ತಾನ ಹೇಳುವುದೊಂದು, ಮಾಡುವುದು ಇನ್ನೊಂದು ಎಂಬುದು ಬಹುತೇಕ ಅಮೆರಿಕನ್ನರಿಗೆ ತಿಳಿದಿಲ್ಲ ಎಂದು ಆರೋಪಿಸಿದರು.