ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಗೂಢಚಾರದ ಆರೋಪದ ಮೇಲೆ ಬಂಧಿತನಾಗಿರುವ ಕುಲಭೂಷಣ್ ಜಾಧವ್ ಅವರನ್ನು ಭಾರತಕ್ಕೆ ಒಪ್ಪಿಸುವುದಿಲ್ಲ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ಅವರು ಶುಕ್ರವಾರ ಸಂಸತ್ ಗೆ ತಿಳಿಸಿದ್ದಾರೆ.
ಇರಾನ್ ಮೂಲಕ ಪಾಕಿಸ್ತಾನ ಪ್ರವೇಶಿಸಿದ ಜಾಧವ್ ಅವರನ್ನು ಬಲೋಚಿಸ್ಥಾನದಲ್ಲಿ ಬಂಧಿಸಲಾಗಿದೆ.
ಸರ್ಕಾರಕ್ಕೆ ಸಿಐಎ ಗುತ್ತಿಗೆದಾರ ರೇಮಂಡ್ ದೇವಿಸ್ ಅವರಂತೆ ಜಾಧವ್ ಗೂ ರೆಡ್ ಕಾರ್ಪೆಟ್ ಉಪಚಾರ ನೀಡುವ ಯೋಚನೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅಜಿಜ್, ಜಾಧವ್ ವಿರುದ್ಧ ಸಾಕ್ಷ್ಯಗಳ ಕೊರತೆ ಇದೆ ಎಂದು ನಾವು ಯಾವತ್ತೂ ಹೇಳಿಲ್ಲ ಎಂದರು.
ಜಾಧವ್ ವಿರುದ್ಧ ಈಗಾಗಲೇ ಎಫ್ಐಆರ್ ಸಿದ್ಧವಾಗಿದ್ದು, ಪಾಕಿಸ್ತಾನದಲ್ಲಿ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ ಆರೋಪ ಹೊರಿಸಲಾಗುತ್ತಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅಜಿಜ್ ತಿಳಿಸಿರುವುದಾಗಿ ಡಾನ್ ಆನ್ ಲೈನ್ ವರದಿ ಮಾಡಿದೆ.