ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

2017 ರಲ್ಲಿ ಶೇ.6.5 ರಷ್ಟು ಆರ್ಥಿಕ ಬೆಳವಣಿಗೆಗೆ ಚೀನಾ ಗುರಿ!

2017 ರ ಆರ್ಥಿಕ ವರ್ಷಕ್ಕೆ ಚೀನಾ ಶೇ.6.5 ರಷ್ಟು ಆರ್ಥಿಕ ಬೆಳವಣಿಯ ಗುರಿ ಹೊಂದಿದೆ. ಕಳೆದ ವರ್ಷ 6.5-7 ರಷ್ಟು ಆರ್ಥಿಕ ಗುರಿ ಹೊಂದಿತ್ತು.

ಚೀನಾ
Srinivas Rao BV
Updated On : 5 Mar 2017, 12:45 pm
ಬೀಜಿಂಗ್: 2017 ರ ಆರ್ಥಿಕ ವರ್ಷಕ್ಕೆ ಚೀನಾ ಶೇ.6.5 ರಷ್ಟು ಆರ್ಥಿಕ ಬೆಳವಣಿಯ ಗುರಿ ಹೊಂದಿದೆ. ಕಳೆದ ವರ್ಷ 6.5-7 ರಷ್ಟು ಆರ್ಥಿಕ ಗುರಿ ಹೊಂದಿತ್ತು. 
ವಾಸ್ತವದ ಆರ್ಥಿಕ ಕೆಲಸಗಳಲ್ಲಿ ಚೀನಾ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಲಿದೆ ಎಂದು ಆರ್ಥಿಕ ಮುನ್ನೋಟ ವರದಿಯನ್ನು ಬಿಡುಗಡೆ ಮಾಡಿರುವ ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಹೇಳಿದ್ದಾರೆ. 
ಕಳೆದ ವರ್ಷ 25 ವರ್ಷಗಳಲ್ಲೇ ಅತ್ಯಂತ ಕಡಿಮೆ ಆರ್ಥಿಕ ಬೆಳವಣಿಗೆಯನ್ನು ಕಂಡಿದ್ದ ಚೀನಾ, ಸ್ಥಿರ ಬೆಳವಣಿಗೆ ಹಾಗೂ ಉದ್ಯೋಗ, ಜನಸಾಮಾನ್ಯರ ಜೀವನವನ್ನು ಉತ್ತಮಗೊಳಿಸುವತ್ತ ಗಮನ ಕೇಂದ್ರೀಕರಿಸಲಿದೆ ಎಂದು ಪ್ರಧಾನಿ ಲೀ ಹೇಳಿದ್ದಾರೆ. 

Advertisement

Advertisement

2016 ಗಿಂತ (11 ಮಿಲಿಯನ್ ಉದ್ಯೋಗ) ಈ ವರ್ಷ 1 ಮಿಲಿಯನ್ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಪ್ರಧಾನಿ ಲೀ ಕೆಕಿಯಾಂಗ್ ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement